ಜಾಲ್ಸೂರು: ಲಾರಿಯಲ್ಲಿ ಅಕ್ರಮ ದನ ಸಾಗಾಟದ ಮಾಹಿತಿ ಹಿನ್ನೆಲೆ ಪೊಲೀಸರಿಂದ ತಪಾಸಣೆ

0

ಅಗತ್ಯ ದಾಖಲೆಪತ್ರ ಇದ್ದ ಕಾರಣ ಲಾರಿ ಬಿಟ್ಟು ಕಳಿಸಿದ ಪೊಲೀಸರು

ವಿಟ್ಲದಿಂದ ಚಾಮರಾಜನಗರಕ್ಕೆ ಲಾರಿಯಲ್ಲಿ ಹತ್ತಕ್ಕೂ ಹೆಚ್ಚು ದ‌ನಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಜಾಲ್ಸೂರು ಪೆಟ್ರೋಲ್ ಪಂಪ್ ಬಳಿ ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ, ದನ ಸಾಗಾಟಕ್ಕೆ ಅಗತ್ಯ ದಾಖಲೆಪತ್ರ ಇದ್ದ ಕಾರಣದಿಂದ ಪೊಲೀಸರು ತಪಾಸಣೆ ನಡೆಸಿ ಬಿಟ್ಟು ಕಳಿಸಿದ ಘಟನೆ ಜಾಲ್ಸೂರಿನಲ್ಲಿ ಸೆ.11ರಂದು ರಾತ್ರಿ ಸಂಭವಿಸಿದೆ.


ವಿಟ್ಲದಿಂದ ಚಾಮರಾಜನಗರಕ್ಕೆ ಎರಡು ಲಾರಿಯಲ್ಲಿ ಹತ್ತಕ್ಕೂ ಅಧಿಕ ದನಗಳನ್ನು ಸಾಗಿಸುತ್ತಿದ್ದು, ದಾಖಲೆಪತ್ರಗಳಿದ್ದರೂ, ಚಾಲಕರು ತಡವಾಗಿ ರಾತ್ರಿಯ ವೇಳೆಯಲ್ಲಿ ಸಾಗಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ಷೇಪಿಸಿದ್ದು, ಸುಳ್ಯ ಪೊಲೀಸರು ತಪಾಸಣೆ ನಡೆಸಿದಾಗ ದಾಖಲೆಪತ್ರ ಇದ್ದ ಕಾರಣದಿಂದ ಎರಡೂ ಲಾರಿಯನ್ನು ಹೋಗಲು ಬಿಟ್ಟಿರುವುದಾಗಿ ತಿಳಿದುಬಂದಿದೆ.