
ಯುವಜನ ವಿಕಾಸ ಕೇಂದ್ರ ಯುವಕ ಮಂಡಲ (ರಿ) ಕನಕಮಜಲು ಇದರ ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ ಸಮಾರಂಭ ಕನಕಮಜಲು ಗ್ರಾ.ಪಂ.ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.

ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಚಂದ್ರಶೇಖರ ನೆಡಿಲು ವಹಿಸಿದ್ದರು. ವೇದಿಕೆಯಲ್ಲಿ ಪೂರ್ವಾಧ್ಯಕ್ಷ ಬಾಲಚಂದ್ರ ನೆಡಿಲು, ಕಾರ್ಯದರ್ಶಿ ಕೀರ್ತಿ ಕನ್ನಡ್ಕ ಉಪಸ್ಥಿತರಿದ್ದರು.
ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಕೀರ್ತಿ ಕನ್ನಡ್ಕ ಸಭೆಗೆ ವಾಚಿಸಿದರು, ಹಣಕಾಸಿನ ವರದಿಯನ್ನು ಖಜಾಂಜಿ ರಕ್ಷಿತ್ ಅಕ್ಕಿಮಲೆ ಮಂಡಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ವಾಧ್ಯಕ್ಷ ಬಾಲಚಂದ್ರ ನೆಡಿಲು ನಡೆಸಿಕೊಟ್ಟರು.















ಗೌರವಾಧ್ಯಕ್ಷರಾಗಿ ಚಂದ್ರಶೇಖರ ನೆಡಿಲು, ಅಧ್ಯಕ್ಷರಾಗಿ ರಕ್ಷಿತ್ ಅಕ್ಕಿಮಲೆ, ಉಪಾಧ್ಯಕ್ಷರಾಗಿ ಕೀರ್ತಿ ಕನ್ನಡ್ಕ, ಕಾರ್ಯದರ್ಶಿಯಾಗಿ ಸ್ವಸ್ತಿಕ್ ಕುತ್ಯಾಳ, ಜೊತೆ ಕಾರ್ಯದರ್ಶಿಯಾಗಿ ಪುನೀತ್ ಕನ್ನಡ್ಕ (ಸಾಂತ್ಯಡ್ಕ), ಖಜಾಂಜಿಯಾಗಿ ಹರ್ಷಿತ್ ಉಗ್ಗಮೂಲೆ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಚೇತನ್ ನೆಡಿಲು, ಕ್ರೀಡಾ ಕಾರ್ಯದರ್ಶಿಯಾಗಿ ಅವಿನ್ ಮಳಿ, ಪತ್ರಿಕಾ ಪ್ರತಿನಿಧಿಯಾಗಿ ಅಶ್ವಥ್ ಅಡ್ಕಾರ್, ನಿರ್ದೇಶಕರುಗಳಾಗಿ ರತನ್ ಕೊಲ್ಲಂತಡ್ಕ, ಶಮಂತ್ ಅಕ್ಕಿಮಲೆ, ಪ್ರಖ್ಯಾತ್ ಕೋಡ್ತಿಲು, ಗುರುರಾಜ್ ನರಿಯೂರುರವರನ್ನು ಆಯ್ಕೆ ಮಾಡಲಾಯಿತು.

ಪದ ಪ್ರಧಾನ ಸಮಾರಂಭದ ಸಭಾಧ್ಯಕ್ಷತೆಯನ್ನು ಯುವಕಮಂಡಲದ ಅಧ್ಯಕ್ಷ ಚಂದ್ರಶೇಖರ ನೆಡಿಲು ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಪಿಡಿಒ ದಾಮೋದರ ಗೌಡ ಕೋಡ್ತಿಲು, ಯುವಜನ ಸಂಯುಕ್ತ ಮಂಡಳಿ ಉಪಾಧ್ಯಕ್ಷ ಪ್ರವೀಣ್ ಜಯನಗರ, ಯುವಕ ಮಂಡಲದ ಗೌರವಾಧ್ಯಕ್ಷ ಬಾಲಚಂದ್ರ ನೆಡಿಲು ಉಪಸ್ಥಿತರಿದ್ದರು.

ಯುವಜನ ಸಂಯುಕ್ತ ಮಂಡಳಿಯ ಉಪಾಧ್ಯಕ್ಷ ಪ್ರವೀಣ್ ಜಯನಗರ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಸತೀಶ್ ಬೊಮ್ಮೆಟ್ಟಿ ಸ್ವಾಗತಿಸಿ, ಸ್ವಸ್ತಿಕ್ ಕುತ್ಯಾಳ ವಂದಿಸಿದರು. ಈಶ್ವರ್ ಕೊರಂಬಡ್ಕ ಕಾರ್ಯಕ್ರಮ ನಿರೂಪಿಸಿದರು.









