ಆಲೆಟ್ಟಿ ರಸ್ತೆಯ ಮೇಲೆ ನಿರಂತರ ನೀರು

0

ಕಿರಿ ಕಿರಿ ಅನುಭವಿಸುತ್ತಿರುವ ವಾಹನ ಸವಾರರು

ಆಲೆಟ್ಟಿ ಮುಖ್ಯ ರಸ್ತೆಯ ಗುರುಂಪು ಎಂಬಲ್ಲಿ ಕಾಂಕ್ರೀಟ್ ರಸ್ತೆಯ ಮೇಲೆ ನಿರಂತರ ನೀರು ನಿಂತು ವಾಹನ ಸವಾರರು ಕಿರಿ ಕಿರಿ ಅನುಭವಿಸುತ್ತಿದ್ದಾರೆ. ರಸ್ತೆಯ ಚರಂಡಿಗೆ ತಡೆಗೋಡೆಯು ಕುಸಿದು ಬಿದ್ದುದರಿಂದ ಚರಂಡಿ ಬ್ಲಾಕ್ ಆಗಿದ್ದು ಮಳೆ ನೀರು ಹರಿಯಲು ಅಡ್ಡಿಯುಂಟಾಗಿದ್ದು ನೀರು ರಸ್ತೆ ಮೇಲೆ ಹರಿಯುತ್ತಿರುವುದು.
ಮಳೆ ನಿಂತ ಮೇಲೂ ರಸ್ತೆ ಮೇಲೆ ನೀರು ನಿಂತಿರುವುದರಿಂದ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿ ಸುತ್ತಿದ್ದಾರೆ. ನಗರ ಪಂಚಾಯತ್ ವ್ಯಾಪ್ತಿಯ ರಸ್ತೆ ಇದಾಗಿದ್ದು ಚರಂಡಿ ದುರಸ್ತಿ ಪಡಿಸಿ ನೀರು ಹರಿಯಲು ಅವಕಾಶ ಮಾಡಿಕೊಡುವ ಮೂಲಕ ಸಮಸ್ಯೆ ನಿವಾರಿಸಬೇಕಾಗಿದೆ.