ನಿಂತಿಕಲ್ಲಿನಲ್ಲಿ ಹೆಚ್.ಪಿ ಶ್ರೀ ಕಲ್ಕುಡ ಫ್ಯೂಯಲ್ ಸ್ಟೇಶನ್ ಸೆ. 21ರಂದು ಶುಭಾರಂಭಗೊಂಡಿತು.
ನೂತನ ಫ್ಯೂಯಲ್ ಸ್ಟೇಶನ್ ನ್ನು ಶಾಸಕಿ ಕು। ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಹೆಚ್.ಪಿ.ಸಿ.ಎಲ್ ಮಂಗಳೂರು ವಿಭಾಗದ ರಿಟೈಲ್ ಡಿ.ಜಿ.ಎಂ ನವೀನ್ ಕುಮಾರ್ ಎಂ. ಬಿ, ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ
ಶ್ರೀಮತಿ ವನಿತ ಸುವರ್ಣ, ಎಡಮಂಗಲ ಗ್ರಾ.ಪಂ. ಅಧ್ಯಕ್ಷ ರಾಮಣ್ಣ ಜಾಲ್ತಾರು, ಬಾಳಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪಾವನ ಜೋಗಿಬೆಟ್ಟು, ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಮತ್ತು ಶ್ರೀಮತಿ ನಾಗವೇಣಿ ರೈ, ಪಜಂಬಿಲ ಭಾಗವಹಿಸಿದ್ದರು.
ಕುಂಬ್ರ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಪ್ರಕಾಶ್ ಕುಮಾರ್ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂತೋಷ್ ರೈ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪಾಲುದಾರರಾದ ಸಂತೋಷ್ ಕುಮಾರ್ ರೈ ಕೈಕಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಾಲುದಾರರಾದ ಸಂತೋಷ್ ರೈ ಕೈಕಾರ ವಂದಿಸಿದರು.