ಊರವರಿಂದ ಬಸ್ ಗೆ ಸ್ವಾಗತ
ಬಾಳುಗೋಡುವರೆಗೆ ಸಂಚರಿಸುತಿದ್ದ ಕರ್ನಾಟಕ ರಾಜ್ಯ ಸಾರಿಗೆಯ ಬಸ್ ಗಳು ಇನ್ನುಮಂದೆ ಬಾಳುಗೋಡಿನ ಬೆಟ್ಟುಮಕ್ಕಿ ವರೆಗೆ ಸಂಚರಿಸಲಿದೆ.
ಪುತ್ತೂರಿನಿಂದ ಬಾಳುಗೋಡಿಗೆ ಸಂಚರಿಸುವ ಬಸ್ ಬೆಟ್ಟುಮಕ್ಕಿ ಭಾಗದ ವರೆಗೆ ಸಂಚರಿಸಬೇಕೆಂದು ಬಹು ಕಾಲದಬೇಡಿಕೆಯಾಗಿದ್ದು ಇದೀಗ ಇಡೇರಿದೆ.
ಈ ಸಂಬಂಧ ಬಾಳುಗೋಡು ಕಾಂಗ್ರೆಸ್ ಗ್ರಾಮ ಸಮಿತಿಯವರು ಸಂಬಂಧ ಪಟ್ಟ ಇಲಾಖೆಗೆ ಮನವಿ ಮಾಡಿದ್ದು, ಅಧಿಕಾರಿಗಳ ಸೂಚನೆ ಮೇರೆಗೆ ಇಂದಿನಿಂದ ಬಾಳುಗೋಡಿಗೆ ಎಲ್ಲಾ ಬಸ್‌ಗಳು ಬೆಟ್ಟುಮಕ್ಕಿ ತನಕ ಸಂಚರಿಸಲಿವೆ.
ಸೆ.29 ರಂದು ಬೆಟ್ಟುಮಕ್ಕಿಯಲ್ಲಿ ಕಾಂಗ್ರೆಸ್ ಗ್ರಾಮ ಸಮಿತಿಯವರು ಹಾಗು ಊರವರು ಬಸ್‌ನ್ನು ಸ್ವಾಗತಿಸಿದರು.
ಈ ಸಂದರ್ಭ ದಯಾನಂದ ಕಟ್ಟೆಮನೆ, ರವಿಕುಮಾರ್ ಕಿರಿಭಾಗ, ಚೇತನ್ ಕಜೆಗದ್ದೆ,ಅನಂತರಾಮ ಆಲ್ಕಬೆ, ಶೈಲೇಶ್ ಕಟ್ಟೆಮನೆ, ಜಯಂತ ಶಿವಾಲ, ಪ್ರಭಾಕರ ಬಾಳುಗೋಡು, ಕರಣಾಕರ ಪೊಯ್ಯಗದ್ದೆ,ಊರವರು ಹಾಜರಿದ್ದರು.
ವರದಿ: ಕುಶಾಲಪ್ಪ ಕಾಂತುಕುಮೇರಿ