ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮಹಾಸಭೆ

0

ನೂತನ ಜಿಲ್ಲಾಧ್ಯಕ್ಷರಾಗಿ ಈಶ್ವರ ವಾರಣಾಶಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿಪ್ರಕಾಶ್ ಪುಣಚ ಆಯ್ಕೆ

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮಹಾಸಭೆ ಪುತ್ತೂರು ದರ್ಬೆ ಪ್ರಶಾಂತ್ ಮಹಲ್ ಸಭಾಂಗಣದಲ್ಲಿ ನಡೆಯಿತು.

ಜಿಲ್ಲಾಧ್ಯಕ್ಷರಾದ ತಾರನಾಥ ಗಟ್ಟಿ ಇವರ ಸಭಾಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷರಾದ ಹರೀಶ್ ಬಂಟ್ವಾಳ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕನ್ಯೂಟ್ ಜೆ ಪಿಂಟೊ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಅಧ್ಯಕ್ಷರಾದ ರಾಮ್‌ದಾಸ್ ಶೆಟ್ಟಿ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಅಧ್ಯಕ್ಷರಾದ ಯಶ್ವಿತ್ ಕಾಳಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಸದಸ್ಯರಿಗೆ ಅಪಘಾತ ವಿಮೆಯ ಬಗ್ಗೆ ಮಾಹಿತಿ ನೀಡಲಾಯಿತು. ಸಂಘದ ಮುಂದಿನ ಯೋಜನೆ-ಯೋಚನೆಗಳ ಬಗ್ಗೆ ಚರ್ಚಿಸಲಾಯಿತು. ತಾಲೂಕು ಹಾಗೂ ಜಿಲ್ಲಾ ಸಮಿತಿಯ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.

ಬಳಿಕ ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಅಶ್ವಿನಿ ಪೆರುವಾಯಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, ಪುತ್ತೂರು ತಾಲೂಕು ಅಧ್ಯಕ್ಷರಾದ ರಾಮ್‌ದಾಸ್ ಶೆಟ್ಟಿಯವರು ಸ್ವಾಗತಿಸಿದರು. ಜ್ಯೋತಿ ಪ್ರಕಾಶ್ ಪುಣಚ ವಂದಿಸಿದರು. ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ನೂತನ ಜಿಲ್ಲಾ ಅಧ್ಯಕ್ಷರಾಗಿ ಈಶ್ವರ ವಾರಣಾಶಿ (ಸುಳ್ಯ ಸುದ್ದಿ), ಗೌರವಾಧ್ಯಕ್ಷರಾಗಿ ಸುಳ್ಯ ಸುದ್ದಿ ಸಂಪಾದಕರಾದ ಹರೀಶ್ ಬಂಟ್ವಾಳ್, ಗೌರವ ಸಲಹೆಗಾರರಾಗಿ ತಾರನಾಥ ಗಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿಪ್ರಕಾಶ್ ಪುಣಚ, ಉಪಾಧ್ಯಕ್ಷರಾಗಿ ರಾಮ್‌ದಾಸ್ ಶೆಟ್ಟಿ ವಿಟ್ಲ ( ವಿಟಿವಿ), ಶಿವಪ್ರಸಾದ್ ಅಲೆಟ್ಟಿ (ಸುದ್ದಿ ಸುಳ್ಯ), ಕೋಶಾಧಿಕಾರಿಯಾಗಿ ಕನ್ಯೂಟ್ ಪಿಂಟೊ (ಸೌತ್ ಕೆನರಾ ಕ್ರಾನಿಕಲ್), ಸಂಘಟನಾ ಕಾರ್ಯದರ್ಶಿಯಾಗಿ ಚಿನ್ಮಯಕೃಷ್ಣ (ನಿಖರ ನ್ಯೂಸ್), ರಮೇಶ್ ನೀರಬಿದಿರೆ (ಸುದ್ದಿ ಸುಳ್ಯ) ಹಾಗೂ ಕಾರ್ಯದರ್ಶಿಗಳಾಗಿ ಜಯಶ್ರೀ ಕೊಯಿಂಗೋಡಿ (ಸುದ್ದಿ ಸುಳ್ಯ), ಡೊನಾಲ್ಡ್ ಪಿರೇರಾ, ಹಾಗೂ ನಿಮಿತಾ ದಿಲೀಪ್ (ಸುದ್ದಿ ಪುತ್ತೂರು) ರವರನ್ನು ಮತ್ತು ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗಿರಿಧರ ಶೆಟ್ಟಿ ಮಂಗಳೂರು, ಶಶಿಧರ ನೆಕ್ಕಿಲಾಡಿ, ಶ್ರೀಧರ ಕಜೆಗದ್ದೆ, ಕೆ.ಟಿ.ಭಾಗೀಶ, ಗಣೇಶ್ ಕುಕ್ಕುದಡಿ, ಉಮೇಶ್ ಮಣಿಕ್ಕಾರ, ಜಗದೀಶ್ ಕಜೆ, ಮನ್ಮಥ ಶೆಟ್ಟಿ ಪುತ್ತೂರು, ಪ್ರಜ್ವಲ್ ಪುತ್ತೂರು, ಅಶ್ವಿನಿ ಪೆರುವಾಯಿ, ಮಧುಶ್ರೀ ಬಿ.ಜೆ., ಭರತ್ ಬಲ್ನಾಡು, ಯಕ್ಷಿತ್ ಪೂರ್ಣ, ಸುಮನಾ ಕೇಪು, ಹಮೀದ್ ವಿಟ್ಲ ಇವರು ಆಯ್ಕೆಯಾದರು.