ಜಯನಗರ ಮಿಲಿಟರಿ ಗ್ರೌಂಡ್ ನಿವಾಸಿ ಶಿವಕುಮಾರ್ (53 ವರ್ಷ)
ಲೋ ಬಿಪಿ ಸಮಸ್ಯೆಯಿಂದ ಡಿ. 9 ರಂದು ನಿಧನರಾದರು.
ಏಕಾಏಕಿ ರಕ್ತದೊತ್ತಡ ಕಡಿಮೆಗೊಂಡ ಹಿನ್ನೆಲೆಯಲ್ಲಿ ಆರೋಗ್ಯದಲ್ಲಿ ಏರುಪೇರಾಗಿದ್ದು ಇವರನ್ನು ಸುಳ್ಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಕೊಂಡು ಹೋಗಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇವರು ಮೃತಪಟ್ಟಿದ್ದಾರೆ.ಕಳೆದ ವಾರದಷ್ಟೇ ಇವರ ಸಹೋದರ ರಾಮಕೃಷ್ಣ ಎಂಬುವರು ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡು ಮೃತಪಟ್ಟಿದ್ದರು.















ಮೃತರು ಟೈಲರ್ ವೃತ್ತಿ ಹಾಗೂ ಟ್ಯಾಪಿಂಗ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.
ಪತ್ನಿ ಮಂಜುಳಾ, ಪುತ್ರರಾದ ಧೀರೇಶ್, ಹರ್ಷವರ್ಧನ, ತಂದೆ ಆರ್ಮುಗ ತಾಯಿ ಲಕ್ಷ್ಮಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.










