ತೋಟಗಾರಿಕಾ ಇಲಾಖೆಯಿಂದ ರೈತರಿಗೆ ವಿವಿಧ ಸವಲತ್ತು : ಅ.18 ಕೊನೆಯ ದಿನ

0

ತೋಟಗಾರಿಕಾ ಇಲಾಖೆಯಿಂದ ಪ.ಜಾತಿ, ಪ.ಪಂ. ರೈತರಿಗೆ ವಿವಿಧ ಸವಲತ್ತು ಗಳಿದ್ದು ರೈತರು ಅರ್ಜಿ ಸಲ್ಲಿಸಬಹುದು. ಅ.18 ಕೊನೆಯ ದಿನವಾಗಿದೆ.

2023-24 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಪರಿಶಿಷ್ಟ ಜಾತಿಯ 60 ಹಾಗೂ ಪರಿಶಿಷ್ಟ ಪಂಗಡದ 40 ಜನ ರೈತರಿಗೆ ರಾಜ್ಯದೊಳಗೆ ತರಬೇತಿ ಕಾರ್ಯಕ್ರಮಕ್ಕೆ ಅನುದಾನವಿದ್ದು, ಆಸಕ್ತರು ಜಾತಿ ಪ್ರಮಾಣ ಪತ್ರ, ಆಧಾರ್ ಹಾಗೂ ಆರ್.ಟಿ.ಸಿ. ಯೊಂದಿಗೆ ಅ.18 ರೊಳಗೆ ಹಿರಿಯ ಸಹಾಯಕ ತೊಟಗಾರಿಕೆ ನಿರ್ದೇಶಕರು ಕಚೇರಿಗೆ ಅರ್ಜಿ ಸಲ್ಲಿಸುವುದು.

ಪರಿಶಿಷ್ಟ ಜಾತಿ ರೈತರಿಗೆ ಇಲಾಖೆಯಲ್ಲಿ ಸಹಾಯಧನ ರೂಪದಲ್ಲಿ ಉಚಿತವಾಗಿ ಟ್ರೈಕೋಡರ್ಮ ಲಭ್ಯವಿದ್ದು, ಆಸಕ್ತ ರೈತರು ನಿಗದಿತ ಅರ್ಜಿಯೊಂದಿಗೆ ಆರ್.ಟಿಸಿ, ಜಾತಿ ಪ್ರಮಾಣ ಪತ್ರ , ಆಧಾರ್, ಪಾಸ್ ಪುಸ್ತಕ ಜೆರಾಕ್ಸ್ ಸಲ್ಲಿಸಿ, ಪಡೆದುಕೊಳ್ಳುವುದು.

2023-24 ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲಗಳ ಅಭಿಯಾನ ತಾಳೆ ಬೆಳೆ ಯೋಜನೆಯಡಿ ತಾಲೂಕಿಗೆ ಪರಿಶಿಷ್ಟ ಜಾತಿ ರೈತರಿಗೆ 0.78 ಲಕ್ಷ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ 0.573 ಲಕ್ಷ ಅನುದಾನ ಲಭ್ಯವಿದ್ದು ನೀರಾವರಿ ವ್ಯವಸ್ಥೆ ಇರುವಂತಹ ಆಸಕ್ತ ರೈತರು ಆರ್.ಟಿಸಿ, ಆರ್.ಡಿ ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರ, ಆಧಾರ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ಅ.18ರೊಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸುವುದು.

2023-24 ನೇ ಸಾಲಿನ ಪಿಎಂಕೆ ಎಸ್ ವೈ ಯೋಜನೆ ಯಡಿ ತೊಟಗಾರಿಕೆ ಬೆಳೆಗಳಿಗೆ ಹನಿ/ನೀರಾವರಿ ಘಟಕ ಅಳವಡಿಸಲು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ರೈತರಿಗೆ ಶೇ.90ರಂತೆ 1 ಎಕ್ರೆಗೆ ಗರಿಷ್ಟ ರೂ.23.500 ಸಹಾಯಧನ ಲಭ್ಯವಿದ್ದು, ಆಸಕ್ತ ರೈತರು ಅ.18ರೊಳಗೆ ಹೆಸರು ನೋಂದಾಯಿಸುವಂತೆ ತಿಳಿಸಿದೆ. ತಾಲೂಕಿಗೆ ಪರಿಶಿಷ್ಟ ಜಾತಿ ರೈತರಿಗೆ 3.10 ಲಕ್ಷ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ 0.83 ಲಕ್ಷ ಅನುದಾನ ಲಭ್ಯವಿರುತ್ತದೆ.

2023-24 ನೇ ಸಾಲಿನ ಎನ್.ಹೆಚ್.ಎಂ. ಯೋಜನೆಯಡಿ ಪರಿಶಿಷ್ಟ ಪಂಗಡ ರೈತರಿಗೆ ನೀರು ಸಂಗ್ರಹಣಾ ಘಟಕ (ಕೃಷಿ ಹೊಂಡ)ಕ್ಕೆ ರೂ.37.500/- ತಾಲೂಕಿಗೆ ಅನುದಾನವಿದ್ದು, ಆಸಕ್ತ ರೈತರು ಆರ್.ಟಿ.ಸಿ, ಜಾತಿ ಪ್ರಮಾಣ ಪತ್ರ ಆಧಾರ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಅ.18 ರೊಳಗೆ ಅರ್ಜಿ ಸಲ್ಲಿಸುವುದು. ಕನಿಷ್ಟ 10m10m3m =300 ಮೂಟರ್ ಕ್ಯೂಬ್ ಘನ ಅಳತೆಯದ್ದು, ನಿರ್ಮಿಸಿ ಅಧಿಕೃತ ಕಂಪೆನಿಯ ಪೋಂಡ್ ಲೈನರ್ ಅಳವಡಿಸದ್ದಲ್ಲಿ ಶೇ.50 ರಂತೆ ರೂ.18750/- ಸಹಾಯಧನ ಪಡೆಯಬಹುದು.

2023-24 ನೇ ಸಾಲಿನ ಎನ್.ಹೆಚ್.ಎಂ. ಯೋಜನೆಯಡಿ ಪರಿಶಿಷ್ಟ ಪಂಗಡ ರೈತರಿಗೆ ಜಾಯಿಕಾಯಿ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ತಾಲೂಕಿಗೆ ರೂ. 20,000 ಅನುದಾನ ಲಭ್ಯವಿದ್ದು ಆಸಕ್ತ ರೈತರು ಅನುಮೋದಿತ ನರ್ಸರಿಯಿಂದ ಗಿಡ ಖರೀದಿಸಿ ಅ.10 ರೊಳಗೆ ಅರ್ಜಿ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗೆ ಸುಳ್ಯ ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.