ಅ.16 : ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ತಾಲೂಕು ಘಟಕದ ಕಚೇರಿ ಸ್ಥಳಾಂತರ

0

ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ತಾಲೂಕು ಘಟಕ ಇದರ ತಾಲೂಕು ಘಟಕದ ಕಚೇರಿ ಪೈಚಾರಿನಿಂದ ಸುಳ್ಯ ರಥಬೀದಿಯಲ್ಲಿ ಇರುವ ಪಂಡಿತ್ ಕಾಂಪ್ಲೆಕ್ಸ್ ನ ಎರಡನೇ ಮಹಡಿಗೆ ಅ. 16 ರಂದು ಸ್ಥಳಾಂತರಗೊಳ್ಳಲಿದೆ.

ಕಚೇರಿಯನ್ನು ಹೈನುಗಾರಿಕೆಯಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸಾಧಕ ಪ್ರಶಸ್ತಿ ಪಡೆದ ಪುರುಷೋತ್ತಮ ಕೊಯಿಕುಳಿಯವರು ಉದ್ಘಾಟನೆ ಮಾಡಲಿದ್ದಾರೆ.


ರೈತ ಸಂಘದ ಹಿರಿಯ ಸದಸ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.