ಸುಬ್ರಹ್ಮಣ್ಯ : ಅಕ್ಕಿ ಕಾಳಿನಲ್ಲಿ ನಾಡಗೀತೆ ಬರೆದು ಇಂಡಿಯಾ ಬುಕ್ ಆಪ್ ರೆಕಾರ್ಡ್ ಮಾಡಿದ ಮೈಕ್ರೋ ಪರಮೇಶ್

0

ಅಕ್ಕಿ ಕಾಳಿನಲ್ಲಿ ಬರೆಯುವ ಸೂಕ್ಷ್ಮ ಕಲೆಯನ್ನು ಕರಗತ ಮಾಡಿಕೊಂಡಿರುವ ಕಲಾ ಸಾಧಕ, ಕುಕ್ಕೆ ಸುಬ್ರಹ್ಮಣ್ಯದ ಮೈಕ್ರೋ ಪರಮೇಶ್ ಅವರು ನಾಡಗೀತೆಯನ್ನು ಅಕ್ಕಿ ಕಾಳಿನಲ್ಲಿ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದಾರೆ.


120 ನಿಮಿಷದಲ್ಲಿ 136 ಅಕ್ಕಿ ಕಾಳನ್ನು ಬಳಸಿಕೊಂಡು ನಾಡಗೀತೆ ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಪದ್ಯವನ್ನು ಬರೆದು ಈ ಸಾಧನೆ ಮಾಡಿದ್ದಾರೆ. ಅತೀ ಕಡಿಮೆ ಅವಧಿಯಲ್ಲಿ ಕನಿಷ್ಟ ಅಕ್ಕಿ ಕಾಳಿನಲ್ಲಿ ನಾಡಗೀತೆ ಬರೆದು ದಾಖಲೆ ಮೆರೆದಿದ್ದಾರೆ. ಕನಿಷ್ಠ ಅವಧಿಯಲ್ಲಿ ಕಡಿಮೆ ಅಕ್ಕಿ ಕಾಳಿನಲ್ಲಿ ಸಾಧನೆ ಮೆರೆದಿರುವುದು ಶ್ರೇಷ್ಠ ಸಾಧನೆಯಾಗಿದೆ. ಇವರ ಈ ಸಾಧನೆಯು ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಪಡೆದಿದೆ.


ಇತ್ತೀಚೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನವರು ಕುಕ್ಕೆಗೆ ಬಂದು ಇವರ ಸಾಧನೆಯನ್ನು ವೀಡಿಯೋ ದಾಖಲೆ ಮಾಡಿಕೊಂಡು ಹೋಗಿದ್ದರು. ಇದೀಗ ಇವರ ಸಾಧನೆಯು ಇಂಡಿಯಾ ಬುಕ್ ಆಪ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದೆ. ಈ ಬಗ್ಗೆ ಸಂಸ್ಥೆಯು ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿಯನ್ನು ಅ.19 ರಂದು ಹಸ್ತಾಂತರಿಸಿತು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೆಲೆಸಿರುವ ಪರಮೇಶ್ ಮೂಲತಃ ಹಾವೇರಿಯವರು.