ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅವನಿ ಎಂ.ಎಸ್.ಪ್ರಥಮ

0

ಮೂಡಬಿದ್ರೆಯಲ್ಲಿ ಅ.20ರಂದು ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯದ ಅವನಿ ಎಂ‌.ಎಸ್. ಪ್ರಥಮ ಪ್ರಶಸ್ತಿ ಗಳಿಸಿದ್ದಾರೆ.
ಯೋಗೇನ ಚಿತ್ತಸ್ಯ ಯೋಗ ಕೇಂದ್ರ ಸುಳ್ಯ ಇಲ್ಲಿಯ ವಿದ್ಯಾರ್ಥಿನಿಯಾದ ಅವನಿ,ಹಿರಿಯ ಪ್ರಾಥಮಿಕ ವಿಭಾಗ 5 ನೇ ತರಗತಿಯಿಂದ 7 ನೇ ತರಗತಿವರೆಗೆ ನಡೆದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅವನಿ ಎಂ.ಎಸ್‌. ಶಶಿಧರ ಎಂ.ಜೆ.ಮತ್ತು ರೇಷ್ಮಾ ದಂಪತಿಯ ಪುತ್ರಿ.