ಜೇಸಿಐ ಪಂಜ ಪಂಚಶ್ರೀ ನೂತನ ಪದಾಧಿಕಾರಿಗಳು: ಅಧ್ಯಕ್ಷರಾಗಿ ಜೀವನ್ ಮಲ್ಕಜೆ ,ಕಾರ್ಯದರ್ಶಿಯಾಗಿ ಜೀವನ್ ಶೆಟ್ಟಿಗದ್ದೆ

0

ಜೇಸಿಐ ಪಂಜ ಪಂಚಶ್ರೀಯ 2024 ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆಯು ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದ ಸಭಾಭವನದಲ್ಲಿ ನ. 22 ರಂದು ನಡೆಯಿತು.


ಘಟಕದ ನೂತನ ಅಧ್ಯಕ್ಷರಾಗಿ ಜೆಸಿ ಜೀವನ್ ಮಲ್ಕಜೆ ಅವಿರೋಧವಾಗಿ ಆಯ್ಕೆಯಾದರು.
ಕಾರ್ಯದರ್ಶಿಯಾಗಿ ಜೆಸಿ. ಜೀವನ್ ಶೆಟ್ಟಿಗದ್ದೆ, ಕೋಶಾಧಿಕಾರಿಯಾಗಿ ಜೆಸಿ ಪುನೀತ್ ಮೂಲೆಮನೆ ಆಯ್ಕೆಯಾದರು. ಜೊತೆ ಕಾರ್ಯದರ್ಶಿಯಾಗಿ ಜೆಸಿ ಕಿರಣ್ ನೆಕ್ಕಿಲ, ಉಪಾಧ್ಯಕ್ಷರುಗಳಾಗಿ ಜೆಸಿ ಪ್ರವೀಣ್ ಕಾಯರ , ಜೆಸಿ ದೇವಿ ಪ್ರಸಾದ್ ಚಿಕ್ಮುಳಿ , ಜೆಸಿ ಕೌಶಿಕ್ ಕುಳ, ಜೆಸಿ ವಾಚಣ್ಣ ಕೆರೆಮೂಲೆ, ಜೆಸಿ.ಕುಸುಮಾಧರ
ಕಕ್ಯಾನ, ನಿರ್ದೇಶಕರುಗಳಾಗಿ ಜೆಸಿ ವಿಜೇಶ್ ಹಿರಿಯಡ್ಕ, ಜೆಸಿ ದುರ್ಗಾದಾಸ್ ಕಡ್ಲಾರ್, ಜೆಸಿ ಪ್ರಕಾಶ್ ಅಳ್ಪೆ, ಜೆಸಿ ವಿನ್ಯಾಸ್ ಕೊಚ್ಚಿ, ಜೆಸಿ ಗಗನ್ ಕಿನ್ನಿಕುಮೇರಿ, ಜೆಸಿ ಸುಬ್ರಹ್ಮಣ್ಯ ಕಕ್ಯಾನ, ಜೆಸಿ ಪ್ರವೀಣ್ ಕುಂಜತ್ತಾಡಿ, ಜೆಸಿ ಅಶ್ವತ್ ಬಾಬ್ಲುಬೆಟ್ಟು , ಜೆಸಿ ಶ್ರೇಯಸ್ ತುಪ್ಪದ ಮನೆ, ಜೆಸಿ. ಪ್ರಜ್ವಲ್ ಮುಂಡೋಡಿ, ಜೆಸಿ ಚರಣ್ ದೇರಪ್ಪಜ್ಜನ ಮನೆ , ಜೆಸಿ ಅಶೋಕ್ ಕುಮಾರ್ ದಿಡುಪೆ, ಪವನ್ ಮೂಲೆಮನೆ, ತೀರ್ಥಪ್ರಸಾದ್ ಪಲ್ಲತಡ್ಕ ಆಯ್ಕೆಯಾದರು.

ವೇದಿಕೆಯಲ್ಲಿ ಘಟಕ ಅಧ್ಯಕ್ಷ ಜೇಸಿ ಲೋಕೇಶ್ ಅಕ್ರಿಕಟ್ಟೆ , ಸ್ಥಾಪಕ ಅಧ್ಯಕ್ಷ ಜೆಸಿ ದೇವಿ ಪ್ರಸಾದ್ ಜಾಕೆ, ನಿಕಟಪೂರ್ವಾಧ್ಯಕ್ಷ ಜೆಸಿ ಶಿವಪ್ರಸಾದ್ ಹಾಲೆಮಜಲು, ಕಾರ್ಯದರ್ಶಿ ಜೇಸಿ. ವಾಚಣ್ಣ ಕೆರೆಮೂಲೆ ಉಪಸ್ಥಿತರಿದ್ದರು. ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಗಳಾದ ಜೆಸಿ ಶಿವಪ್ರಸಾದ್ ಹಾಲೆಮಜಲು ನಡೆಸಿಕೊಟ್ಟರು. ಹಾಗೂ ಸಭೆಯ ಕಾರ್ಯದರ್ಶಿಯಾಗಿ ಜೆಸಿ ವಿಜೇಶ್ ಹಿರಿಯಡ್ಕ ಕೆಲಸ ನಿರ್ವಹಿಸಿದರು. ಘಟಕದ ಎಲ್ಲಾ ಪೂರ್ವಾಧ್ಯಕ್ಷರುಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು