ಮುಳ್ಯ – ಅಟ್ಲೂರು ಶಾಲಾ ಮಕ್ಕಳಿಗೆ ದತ್ತು ಪ್ರಾಯೋಜಕರಿಂದ ಉಚಿತ ನೋಟ್ ಬುಕ್ ವಿತರಣೆ

0

ಅಜ್ಜಾವರ ಗ್ರಾಮದ ಮುಳ್ಯ – ಅಟ್ಲೂರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇದರ ದತ್ತು ಪ್ರಾಯೋಜಕ ಹಾಗೂ ದಾನಿಗಳು ಆದ ರವಿಪ್ರಕಾಶ್ ಅಟ್ಟೂರ್ ರವರು ಪ್ರತಿ ವರ್ಷದಂತೆ ಈ ಸಾಲಿನ ಮಕ್ಕಳಿಗೆ 29,000/-ಸಾವಿರ ಮೌಲ್ಯದ ನೋಟ್ ಬುಕ್ ಹಾಗೂ ಪುಸ್ತಕಗಳನ್ನು ಜು.1ರಂದು ನಡೆದ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಪೋಷಕರ ಸಭೆಯಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವಿ ಪ್ರಸಾದ್ ಅತ್ಯಾಡಿ ಸಮಿತಿ ಪದಾಧಿಕಾರಿಗಳು, ಮಕ್ಕಳ ಪೋಷಕರು, ಶಿಕ್ಷಕ ವೃಂದ ಉಪಸ್ಥಿತಿ ಇದ್ದರು, ಶಿಕ್ಷಕಿ ಅಲಕ ನಂದಿನಿ ಕಾರ್ಯಕ್ರಮ ನಿರೂಪಿಸಿದರು.