ಬೆಳ್ಳಾರೆ ಗ್ರಾಮ ಪಂಚಾಯತ್ ನ 2024- 25ನೇ ಸಾಲಿನ ವಿಶೇಷ ಚೇತನರ ವಿಶೇಷ ಗ್ರಾಮ ಸಭೆಯು ಜ.6 ರಂದು ಬೆಳ್ಳಾರೆ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಮಿತಾ . ಎಲ್ .ರೈ ರವರು ವಹಿಸಿದ್ದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಸಿ .ವಿ ರವರು ಶೇ.5 ಅನುದಾನದ ಮಾಹಿತಿ ನೀಡಿದರು.
ಮತ್ತು ವಿಶೇಷ ಚೇತನರ ಬೇಡಿಕೆ ಸ್ವೀಕರಿಸಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಶ್ರೀಮತಿ ಪುಷ್ಪಶ್ರೀ ರವರು ಇಲಾಖೆಯ ಮಾಹಿತಿ ನೀಡಿದರು. ಪಂಚಾಯಿತಿಯ ಲೆಕ್ಕ ಸಹಾಯಕರು ಶ್ರೀಮತಿ ಸುಶೀಲಾ ಎನ್.ಪಂಚಾಯತ್ ಸದಸ್ಯರಾದ ಮಣಿಕಂಠ ಹಾಗೂ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ನಳಿನಿ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ ,ಎಲ್ ಸಿ ಆರ್ ಪಿ, ಪೋಷಕರು,ಗ್ರಾಮ ಪಂಚಾಯತ್ ಸಿಬಂದಿಗಳು ಮತ್ತಿತರಿದ್ದರು.
ಗ್ರಾಮ ಸಭೆಯಲ್ಲಿ ವಿಶೇಷ ಚೇತನರಿಗೆ ಮಂಚ ಹಾಗೂ ಹಾಸಿಗೆ ವಿತರಿಸಲಾಯಿತು. ಪಂಚಾಯಿತಿ ಪುನರ್ ವಸತಿ ಕಾರ್ಯಕರ್ತೆ ಶ್ರೀಮತಿ ಪುಷ್ಪಶ್ರೀ ಅವರು ಸ್ವಾಗತಿಸಿದರು.
ಸಂಜೀವಿನಿಯ ಎಲ್ ಸಿ ಆರ್ ಪಿ ವಂದಿಸಿದರು.