ಪತ್ರಕರ್ತ ಶರೀಫ್ ಅವರನ್ನು ಧಾರ್ಮಿಕ ವಿದ್ವಾಂಸರು ಹಾಗೂ
ಸಮಸ್ತ ಕಾರ್ಯದರ್ಶಿಗಳಾದ ಬದ್ರುಸ್ಸಾದಾತ್ ಅಸ್ಸಯ್ಯದ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ಅವರು ಸನ್ಮಾನಿಸಿದರು. ಕಾರ್ಯಕ್ರಮ ನಿಮಿತ್ತ ಸುಳ್ಯಕ್ಕೆ ಆಗಮಿಸಿದ್ದ ತಂಙಳ್ ಅವರು ಹರ್ಲಡ್ಕ ವಿಲ್ಲಾಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶರೀಫ್ ಜಟ್ಟಿಪಳ್ಳ ಪತ್ರಕರ್ತನಾಗಿ, ಸಾಮಾಜಿಕ ಕಾರ್ಯಕರ್ತನಾಗಿ ಸಲ್ಲಿಸಿದ ಸೇವೆಯನ್ನು ಅಭಿನಂದಿಸಿ ಸನ್ಮಾನಿಸಿದರು.ಉದ್ಯಮಿ ಲತೀಫ್ ಹರ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು