Home ಕ್ರೈಂ ನ್ಯೂಸ್ ಕನಕಮಜಲಿನಲ್ಲಿ ಅಂಗಡಿ ಕಳವುಗೈಯುತ್ತಿದ್ದಾಗಲೇ ಕಳ್ಳರನ್ನು ಹಿಡಿದ ಊರವರು

ಕನಕಮಜಲಿನಲ್ಲಿ ಅಂಗಡಿ ಕಳವುಗೈಯುತ್ತಿದ್ದಾಗಲೇ ಕಳ್ಳರನ್ನು ಹಿಡಿದ ಊರವರು

0

ರಿಟ್ಸ್ ಕಾರಿನಲ್ಲಿ‌ ಬಂದಿದ್ದ ಇಬ್ಬರು ಕಳ್ಳರು – ಪೋಲೀಸ್ ವಶ

ಕನಕಮಜಲಿನಲ್ಲಿ ಅಂಗಡಿ ಕಳವು ನಡೆಸುತ್ತಿದ್ದಾಗಲೇ ಇಬ್ಬರು ಕಳ್ಳರನ್ನು ಊರವರು ಹಿಡಿದು, ವಿಚಾರಿಸಿ ಇದೀಗ ಪೋಲೀಸರಿಗೊಪ್ಪಿಸಿರುವ ಘಟನೆ ವರದಿಯಾಗಿದೆ.

ಕನಕಮಜಲು ಗ್ರಾಮದ ನರಿಯೂರು ಸೀತಾರಾಮ ಗೌಡರ ಕಟ್ಟಡದಲ್ಲಿರುವ ಧನಂಜಯ ಎಂಬವರ ಮಾಲಕತ್ವದ ಶ್ರೀ ಗಣೇಶ್ ಸ್ಟೋರ್ ನ ಒಳಗೆ ರಾತ್ರಿ ಸುಮಾರು 3.30 ಕ್ಕೆ ಜೋರು‌ ಶಬ್ದ ಕೇಳುತ್ತಿತ್ತೆಂದೂ, ಇದು ಸೀತಾರಾಮ ಗೌಡರ ಮಗನಿಗೆ ಕೇಳಿ ಅವರು ಅಂಗಡಿ‌ ಬಳಿ‌ ಬಂದು ನೋಡಿದಾಗ, ಎದುರೊಂದು ರಿಟ್ಸ್ ಕಾರು ಇತ್ತೆಂದೂ, ಅಂಗಡಿ ಶೆಟರ್ ಒಡೆದಿತ್ತೆನ್ನಲಾಗಿದೆ. ತಕ್ಷಣ ಅವರು ಮನೆಯವರಿಗೆ ಹಾಗೂ ಕನಕಮಜಲಿನ ಸ್ಥಳೀಯರಿಗೆ ಈ ವಿಷಯ ತಿಳಿಸಿದರು.

ಅಂಗಡಿಯೆದುರು ಜನ ಸೇರಿ ಅಂಗಡಿಯ ಎದುರು‌ನಿಂತಿದ್ದ ಹಾಗೂ ಅಂಗಡಿಯೊಳಗೆ ಕಳವು ನಡೆಸುತ್ತಿದ್ದ ಕಳ್ಳನನ್ನು ಹಿಡಿದುಕೊಂಡರು. ವಿಚಾರಿಸಿದಾಗ
ಬಂಟ್ವಾಳದ ಸಜೀಪ ಮೂಲದ ಸುಹೈಲ್ ಹಾಗು ರಿಯಾಜ್ ಎಂದು ಪರಿಚಯ ಹೇಳಿದರೆನ್ನಲಾಗಿದೆ. ಅಲ್ಲದೆ ಬಾಡಿಗೆ ಕಾರಿನಲ್ಲಿ ಅವರು ಬಂದಿದ್ದರೆಂದು ತಿಳಿದುಬಂದಿದೆ.

ಬಳಿಕ ಆ ಇಬ್ಬರು ಕಳ್ಳರನ್ನು ಪೋಲೀಸರಿಗೆ ಒಪ್ಪಿಸಿದರೆಂದು ತಿಳಿದುಬಂದಿದೆ.

ಕನಕಮಜಲು ಪರಿಸರದಲ್ಲಿ ಇತ್ತೀಚಿನ ಕೆಲ ವರ್ಷದಿಂದ ಕೆಲವು ಕಳವು ಪ್ರಕರಣ ನಡೆದಿತ್ತು. ಅದೆಲ್ಲವೂ ಇದುವರೆಗೆ ಪತ್ತೆಯಾಗಿರಲಿಲ್ಲ. ಇದೀಗ ರೆಡ್ ಹ್ಯಾಂಡಾಗಿ ಊರವರೇ ಸೇರಿ ಕಳ್ಳನನ್ನು ಹಿಡಿದಿದ್ದಾರೆ.

ಕನಕಮಜಲಿನಲ್ಲಿ ಅಂಗಡಿ ಕಳ್ಳತನಕ್ಕೂ ಮೊದಲು ಇವರಿಬ್ಬರೂ ಕಾವಿನಲ್ಲಿಯೂ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿ ಬಂದಿದ್ದರು ಎನ್ನಲಾಗಿದೆ.

NO COMMENTS

error: Content is protected !!
Breaking