ಅವಿಶ್ವಾಸಕ್ಕೆ ಸಹಿ ಹಾಕಿದ ಆರು ಮಂದಿ ಗೈರು : ಕೋರಂ ಕೊರತೆಯಲ್ಲಿ ಸಭೆ ರದ್ದು
ಉಪಾಧ್ಯಕ್ಷ ಸ್ಥಾನ ಉಳಿಸಿಕೊಂಡ ತಿರುಮಲೇಶ್ವರಿ ಅರ್ಭಡ್ಕ
ಜಾಲ್ಸೂರು ಗ್ರಾಮದ ಪಂಚಾಯತ್ ಉಪಾಧ್ಯಕ್ಷರಾಗಿರುವ ತಿರುಮಲೇಶ್ವರಿ ಅರ್ಭಡ್ಕರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಸಹಿ ಹಾಕಿದ ಆರು ಮಂದಿ ಸದಸ್ಯರು ಸಭೆಗೆ ಬಾರದೇ ಅವಿಶ್ವಾಸ ಬಿದ್ದು, ತಿರುಮೇಶ್ವರಿಯವರು ಉಪಾಧ್ಯಕ್ಷ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರ ಅಧ್ಯಕ್ಷತೆಯಲ್ಲಿ ಜಾಲ್ಸೂರು ಗ್ರಾ.ಪಂ. ಕಚೇರಿಯಲ್ಲಿ ಅವಿಶ್ವಾಸ ಗೊತ್ತುವಳಿ ಸಭೆ ಆಯೋಜನೆ ಗೊಂಡಿತ್ತು.



ಒಟ್ಟು 17 ಮಂದಿ ಪಂಚಾಯತ್ ಸದಸ್ಯರಲ್ಲಿ 7 ಮಂದಿ ಮಾತ್ರ ಸಭೆಗೆ ಬಂದಿದ್ದರು. ಅವಿಶ್ವಾಸಕ್ಕೆ ಸಹಿ ಹಾಕಿದ 6 ಮಂದಿ ಹಾಗೂ ಸಹಿ ಹಾಕದ 4 ಮಂದಿ ಸಭೆಗೆ ಬಂದಿರಲಿಲ್ಲ. ಬೆಳಗ್ಗೆ 11 ಗಂಟೆಯಿಂದ12 ಗಂಟೆ ತನಕ ಸದಸ್ಯರ ಬರುವಿಕೆಗಾಗಿ ಸಮಯ ನೀಡಲಾಗಿತ್ತು 9 ಮಂದಿ ಮಾತ್ರ ಇದ್ದುದರಿಂದ ಕೋರಂ ಕೊರತೆಯ ಹಿನ್ನಲೆಯಲ್ಲಿ ಸಭೆಯನ್ನೇ ರದ್ದು ಮಾಡಲಾಯಿತು. ಆ ಮೂಲಕ ಅವಿಶ್ವಾಸ ಬಿದ್ದು, ತಿರುಮೇಶ್ವರಿಯವರ ಉಪಾಧ್ಯಕ್ಷ ಸ್ಥಾನ ಉಳಿದುಕೊಂಡಿತು.
ನಿಯಮದ ಪ್ರಕಾರ ಸಭೆ 17 ಮಂದಿ ಸದಸ್ಯರಲ್ಲಿ 12 ಮಂದಿ ಸದಸ್ಯರು ಸಭೆಗೆ ಬರಬೇಕು. ಹಾಗಿದ್ದರೆ ಮಾತ್ರ ಸಭೆ ನಡೆಯುತ್ತದೆ. ಇಲ್ಲಿ 9 ಮಂದಿ ಮಾತ್ರ ಸದಸ್ಯರಿದ್ದರು.