ಪೋಲೀಸ್ ಹೆಡ್ ಕಾನ್‌ಸ್ಟೇಬಲ್ ಮಂಡೆಕೋಲಿನ ಸಂತೋಷ್ ಕಣೆಮರಡ್ಕರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

0

ಮಂಗಳೂರಿನ ಸಿಟಿ ಕ್ರೈಂ ಬ್ರಾಂಚ್‌ನಲ್ಲಿ ಪೋಲೀಸ್ ಹೆಡ್‌ಕಾನ್‌ಸ್ಟೇಬಲ್ ಆಗಿರುವ ಸುಳ್ಯ ಮಂಡೆಕೋಲು ಗ್ರಾಮದ ಕಣೆಮರಡ್ಕ ಸಂತೋಷ್‌ರಿಗೆ ಮುಖ್ಯಂಂತ್ರಿಗಳ ಚಿನ್ನದ ಪದಕ ಘೋಷಣೆಯಾಗಿದೆ.
೨೦೦೫ರಲ್ಲಿ ಪೋಲೀಸ್ ಇಲಾಖೆಗೆ ಸೇರಿದ್ದ ಇವರು ಪಾಂಡೇಶ್ವರ ಠಾಣೆಯಲ್ಲಿ ಸೇವೆ ಆರಂಭಿಸಿದರು. ಬಳಿಕ ಉರ್ವ ಠಾಣೆಗೆ ವರ್ಗಾವಣೆಗೊಂಡರು. ಅಲ್ಲಿ ಸೇವೆಯಲ್ಲಿರುವಾಗಲೇ ೨೦೧೬ರಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಪದೋನ್ನತಿಗೊಂಡ ಇವರು ಅಲ್ಲೇ ಸೇವೆ ಮುಂದುವರಿಸಿದರು. ಬಳಿಕ ಸೈಬರ್ ಕ್ರೈಂ ನಲ್ಲಿ ಸೇವೆ ಸಲ್ಲಿಸಿ ಕಳೆದ ೪ ವರ್ಷಗಳಿಂದ ಸಿಟಿ ಕ್ರೈಂ ಬ್ರಾಂಚ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕಳೆದ ೪ ವರ್ಷಗಳಿಂದ ಕ್ರೈಂ ಬ್ರಾಂಚ್‌ನಲ್ಲಿ ಇರುವ ಸಂತೋಷ್‌ರವರು ಇತ್ತೀಚೆಗೆ ನಡೆದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ, ೭೫ ಕೋಟಿ ಮೊತ್ತದ ಮಾದಕ ದ್ರವ್ಯಗಳ ಸಾಗಾಟ ಪ್ರಕರಣ, ಕಳ್ಳ ನೋಟು ಸಾಗಾಟ ಮತ್ತಿತರ ಹಲವು ಪ್ರಮುಖ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ತಂಡದಲ್ಲಿ ಸಕ್ರಿಯರಾಗಿದ್ದರು.
ಈ ಹಿನ್ನಲೆಯಲ್ಲಿ ಇಲಾಖಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಘೋಷಣೆಯಾಗಿದೆ. ಎಪ್ರಿಲ್ ನಲ್ಲಿ ಪದಕ ಪ್ರದಾನ ಸಮಾರಮಭ ಬೆಂಗಳೂರಿನಲ್ಲಿ ನಡೆಯಲಿದೆ.
ಸಂತೋಷ್ ಕಣೆಮರಡ್ಕರವರು ಮಂಡೆಕೋಲಿನ ಕಣೆಮರಡ್ಕ ನಾರಾಯಣ – ಕಮಲಾಕ್ಷಿ ದಂಪತಿಗಳ ಪುತ್ರ.
ಪತ್ನಿ ಶ್ರೀಮತಿ ರಂಜಿನಿಯವರು ಮಂಗಳೂರು ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಇವರಿಗೆ ಅತುಲ್ ಹಾಗೂ ಆರಾಧ್ಯ ಇಬ್ಬರು ಮಕ್ಕಳು.