ಮಗುವಿಗೆ ಬಿಸಿ ಪಾತ್ರೆಯಿಂದ ಸುಟ್ಟು ಗಾಯ ಮಾಡಿದ್ದ ತಾಯಿ : ಆರೋಪ ಸಾಬೀತು : ಶಿಕ್ಷೆ ಪ್ರಕಟ

0

ತಾಯಿಯೊಬ್ಬಳು ತನ್ನ‌ 5 ವರ್ಷ ಪ್ರಾಯದ ಮಗುವಿಗೆ ಬಿಸಿ ಪಾತ್ರೆಯಿಂದ ಸುಟ್ಟು ಗಾಯಗೊಳಿಸಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು, ಆರೋಪ ಸಾಬೀತಾಗಿದ್ದು 2025ರ ಜನವರಿ 4 ರಂದು ನ್ಯಾಯಾಲಯವು ಶಿಕ್ಷೆ ಪ್ರಮಾಣ ಘೋಷಿಸಿದೆ.

ಕಾವ್ಯಶ್ರಿ ಎಂಬವರು 2022ರ ಆ.16ರಂದು ಸುಳ್ಯ ಗಾಂಧಿನಗರ ನಾವೂರು ಎಂಬಲ್ಲಿರುವ ತನ್ನ ತಾಯಿಯ ಮನೆಯಲ್ಲಿ ತನ್ನ ವೈಯುಕ್ತಿಕ ವಿಚಾರವಾಗಿ ಹಾಲು ಬಿಸಿ ಮಾಡುವ ಪಾತ್ರೆಯನ್ನು ಗ್ಯಾಸ್ ಸ್ಟವ್ ನಿಂದ ಬಿಸಿ ಮಾಡಿ 5 ವರ್ಷ ಪ್ರಾಯದ ತನ್ನ ಮಗಳಿಗೆ ಎಡ ಕೆನ್ನೆಗೆ , ಬಲ ಕೈ ತೋಳಿಗೆ , ಎಡ ಕೈ ಭುಜಕ್ಕೆ , ಎಡ ಕಾಲಿನ ತೊಡೆಗೆ ಸ್ಟೀಲ್ ಪಾತ್ರೆಯಿಂದ ಸುಟ್ಟು ನೋವುಂಟು ಮಾಡಿ ಸಾದಾ ಸ್ವರೂಪದ ಗಾಯ‌ವುಂಟು ಮಾಡಿದ್ದರು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ಅಧಿಕಾರಿಯಾದ ರಶ್ಮಿಯವರಿಗೆ ವಿಷಯ ಗೊತ್ತಾಗಿ ಅವರು ಸ್ಥಳ ಭೇಟಿ ಮಾಡಿದರಲ್ಲದೆ, ಸುಳ್ಯ ಪೋಲೀಸ್ ಠಾಣೆಯಲ್ಲಿ ತಾಯಿ ವಿರುದ್ಧ ದೂರು ದಾಖಲಿಸಿದ್ದರು.

ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ‌ಆಗಿ ಆಪಾದಿತಳು ಕಲಂ 324 ಐ.ಪಿ.ಸಿ ಮತ್ತು ಕಲಂ 75 ಜೆ.ಜೆ.ಆಕ್ಟ್ ಪ್ರಕಾರ ಅಪರಾಧ ಎಸಗಿರುವುದು ಸಾಬಿತಾಗಿದ್ದು, ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಬಿ.ಮೋಹನ್ ಬಾಬು ರವರು ಆಪಾದಿತೆಯನ್ನು ದೋಷಿ ಎಂದು 2024 ಡಿ.30ರಂದು ತೀರ್ಪು ನೀಡಿರುತ್ತಾರೆ.
ಶಿಕ್ಷೆಯ ಪ್ರಮಾಣವನ್ನು 2025 ಜ.4ರಂದು ನ್ಯಾಯಾಲಯವು ಘೋಷಿಸಿದ್ದಾರೆ.ಅಪಾದತೆಗೆ ಕಲಂ 75 ಜೆ.ಜೆ ಆಕ್ಟ್ ರಂತೆ ರೂ.5000/ ದಂಡ ತಪ್ಪಿದ್ದಲ್ಲಿ 1 ತಿಂಗಳ ಸಾದಾ ಕಾರಗೃಹ ವಾಸ ಕಲಂ 324 ರಡಿಯಲ್ಲಿ ರೂ.5000/ ದಂಡ , ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಕಾರಗೃಹ ವಾಸ ವನ್ನು ತೀರ್ಪು ನೀಡಿದೆ.

ಪ್ರಕರಣವನ್ನು ಸರ್ಕಾರದ ಪರವಾಗಿ ಮಾನ್ಯ ಸಹಾಯಕ ಸರ್ಕಾರಿ ಅಭಿಯೋಜಕರು ನಡೆಸಿ, ವಾದ ಮಂಡಿಸಿರುತ್ತಾರೆ.