ಜಟ್ಟಿಪಳ್ಳದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ರಂಗಮಂದಿರ ಉದ್ಘಾಟನೆ

0

ಶ್ರೀರಾಮ ಭಜನಾ ಸೇವಾ ಸಂಘ ಜಟ್ಟಿಪಳ್ಳ ಇದರ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಮತ್ತು ಶ್ರೀ ಚೆನ್ನಕೇಶವ ದೇವರ ಪಟ್ಟಣ ಸವಾರಿ ಹಾಗೂ ಅಯೋಧ್ಯಾ ರಂಗಮಂದಿರ ಉದ್ಘಾಟನೆ ಕಾರ್ಯಕ್ರಮ ಜ.8ರಂದು ಜಟ್ಟಿಪಳ್ಳ ಶ್ರೀ ಚೆನ್ನಕೇಶವ ದೇವರ ವಸಂತ ಕಟ್ಟೆಯಲ್ಲಿ ನಡೆಯಿತು.
ರಂಗಮಂದಿರದ ಉದ್ಘಾಟನೆಯನ್ನು ಪುರೋಹಿತ ನಾಗರಾಜ್ ಭಟ್ ನೇರವೆರಿಸಿದರು.

ಜ.8 ರಂದು ಬೆಳಿಗ್ಗೆ ಶ್ರೀ ಗಣಪತಿ ಹವನ, ಹಾಗೂ ಅಯೋಧ್ಯಾ ರಂಗಮಂದಿರ ಉದ್ಘಾಟನಾ ಕಾರ್ಯಕ್ರಮ ಹಾಗೂ ಶ್ರೀ ಸತ್ಯನಾರಾಯಣ ಮಹಾಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಶ್ರೀರಾಮ ಭಜನಾ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಎಂ ಆರ್,ಉಪಾಧ್ಯಕ್ಷ ರಮಾನಂದ ರೈ ಜಟ್ಟಿಪಳ್ಳ,
ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯರಾದ ಶ್ರೀಮತಿ ಸರೋಜಿನಿ ಪೆಲ್ತಡ್ಕ,
ಶ್ರೀರಾಮ ಭಜನಾ ಸೇವಾ ಸಂಘದ ಗೌರವಧ್ಯಕ್ಷ ರಾಮಚಂದ್ರ ಪೆಲ್ತಡ್ಕ , ಮಾನಸ ಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ಚಿತ್ರಲೇಖಾ ಮಡಪ್ಪಾಡಿ,ಸದಸ್ಯರಾದ ಸುನಿತಾ,ಪಾರ್ವತಿ ನಾರಾಯಣ, ಕಪಿಲ ಯುವಕ ಮಂಡಲ ಅಧ್ಯಕ್ಷ ಹರೀಶ್ ಜೆ ಬಿ ,ಕುಲದೀಪ್ ಜಟ್ಟಿಪಳ್ಳ, ವಿಶುಕುಮಾರ್, ಮಹೇಶ್ ಕುಮಾರ್,ಲಕ್ಷಣ ಆಚಾರಿ,ಸಂತೋಷ್ ಸ್ವಾಮಿ,ಚೇತನ್ ಜಟ್ಟಿಪಳ್ಳ, ವಿಪಿನ್ ಜಟ್ಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.

ಶ್ರೀರಾಮ ಭಜನಾ ಸೇವಾ ಸಂಘದ ಕಾರ್ಯದರ್ಶಿ ರಘುನಾಥ್ ಜಟ್ಟಿಪಳ್ಳ ಸ್ವಾಗತಿಸಿ ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.