ಉಸ್ತುವಾರಿ ಸಚಿವರ ಪಟ್ಟಿಯಲ್ಲಿ ಬಿಜೆಪಿಯವರ ಹೆಸರಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೇಮಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿಯವರಿಗೆ ನೀಡಿರುವ ಪಟ್ಟಿಯಲ್ಲಿ ಬಿಜೆಪಿಯವರೊಬ್ಬರ ಹೆಸರಿದೆ ಎಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಮನದಾಳದ ಮಾತು ಎಂಬ ಶಿರೋನಾಮೆಯಲ್ಲಿರುವ ಈ ಕುರಿತ ಬರಹವೊಂದು ವೈರಲ್ ಆಗುತ್ತಿದೆ.
” ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ಯ ಸದಸ್ಯರ ಪ್ರತಿಯೊಂದು ಉಸ್ತುವಾರಿ ಸಚಿವರು ಕಳುಹಿಸಿದ್ದು ಎನ್ನಲಾದ ಪಟ್ಟಿಯೊಂದು ವೈರಲ್ ಆಗುತ್ತಿದೆ. ಈ ಪಟ್ಟಿಯಲ್ಲಿ ಇರುವ ಕಡಬ ತಾಲೂಕಿನ ಅಜಿತ್ ಕುಮಾರ್ ಎಂಬ ವ್ಯಕ್ತಿಯ ಹೆಸರು ಇರುತ್ತದೆ ಈ ವ್ಯಕ್ತಿಯ ಹೆಸರು ಕಡಬ ಕಾಂಗ್ರೆಸ್ಸಿನಲ್ಲಿ ಮೊದಲ ಬಾರಿ ಕೇಳುತ್ತಿದ್ದಾರೆ.
ಮುಂಬರುವ ಜಿಲ್ಲಾ ಪಂಚಾಯತ್ ಗೆ ಬಿಜೆಪಿ ಅಭ್ಯರ್ಥಿ ಎಂದು ಬಿಜೆಪಿ ಆಂತರಿಕ ವಿಷಯ ಹೊರಗೆ ಬಂದಿರುತ್ತದೆ ಹಾಗೂ ಪಕ್ಷಕ್ಕಾಗಿ ದುಡಿಯದಿರುವ ಹಿಂಬಾಗಿಲಿನಲ್ಲಿ ಬಿಜೆಪಿ ಗೆ ಕೆಲಸ ಮಾಡುವಂತವರಿಗೆ ಪಕ್ಷ ಅವಕಾಶ ಕೊಡುತ್ತಿದೆಯಾ ಎಂಬ ಸಂಶಯ ಪಟ್ಟಿಯನ್ನು ನೋಡಿದಾಗ ಅನಿಸುತ್ತಿದೆ. ಇಂತಹ ಬಿಜೆಪಿಯ ಕಾರ್ಯಕರ್ತನನ್ನು ದೇವಾಲಯದ ಟ್ರಶ್ಟಿಗೆ ಸೂಚಿಸಿದವರ ಮೇಲೆ ಪಕ್ಷ ಕಠಿಣ ನಿರ್ಧಾರ ಕೈಗೊಳ್ಳಬೇಕು ಹಾಗೂ ಅಜಿತ್ ಕುಮಾರ್ ಅವರ ಹೆಸರನ್ನು ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿಯಿಂದ ಹೆಸರು ಹೊರಗಿಡದಿದ್ದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುಣಾವಣೆಯಲ್ಲಿ ಪಕ್ಷಕ್ಕೆ ಮತ ನೀಡಿ ತಟಸ್ಥರಾಗುತ್ತೇವೆ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಹಾಗೂ ದೇವಾಲಯದಲ್ಲಿ ಒಂದು ಬಾರಿ ಸಮಿತಿ ಸದಸ್ಯರಾದವರಿಗೆ ಅವಕಾಶ ನೀಡದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷಕ್ಕಾಗಿ ದುಡಿಯದಿರುವವರಿಗೆ ಅಧಿಕಾರ ಕೊಟ್ಟಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ನಾವುಗಳು ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜಿನಾಮೆ ಕೊಟ್ಟು ತಟಸ್ಥರಾಗುತ್ತೇವೆ ಎನ್ನುವ ಎಚ್ಚರಿಕೆಯನ್ನು ಕಡಬ ಬ್ಲಾಕ್ ಅಧ್ಯಕ್ಷ ರಿಗೆ ನೀಡುತ್ತಿದ್ದೇವೆ ” ಎಂಬ ಬರಹವೊಂದು ವೈರಲ್ ಆಗುತ್ತಿದೆ.