ರಂಜಾನ್ ಹಿನ್ನಲೆ : ಅಂಗಡಿ ಮಳಿಗೆಗಳ ರಾತ್ರಿ ಸಮಯದ ಮಿತಿ ಹೆಚ್ಚುವರಿ ಮಾಡಲು ಮುಸ್ಲಿಂ ಯೂತ್ ಫೆಡರೇಷನ್ ವತಿಯಿಂದ ಪೊಲೀಸ್ ಇಲಾಖೆಗೆ ಮನವಿ
ರಂಜಾನ್ ತಿಂಗಳ ಅವದಿಯಲ್ಲಿ ಹಬ್ಬ ಆಚರಣೆಯ ವಸ್ತು ಖರೀದಿಗಾಗಿ ಗ್ರಾಹಕರ ಅನುಕೂಲಕ್ಕಾಗಿ ವ್ಯಾಪಾರ ಮಳಿಗೆಗಳ ವ್ಯಾಪಾರ ವಹಿವಾಟುಗಳನ್ನು ರಾತ್ರಿ ಹೊತ್ತಿನವರೆಗೆ ವಿಸ್ತರಿಸಿ ಕೊಡುವಂತೆ ಸುಳ್ಯ ತಾಲೂಕು ಮುಸ್ಲಿಂ ಯೂತ್ ಫೆಡರೇಷನ್ ವತಿಯಿಂದ ಸುಳ್ಯ ಪೊಲೀಸ್ ಇಲಾಖೆಗೆ ಮಾ. 23 ರಂದು ಮನವಿ ಮಾಡಿಕ್ಕೊಂಡಿದೆ.

ಸುಳ್ಯದಲ್ಲಿ ಮುಸ್ಲಿಂ ಭಾಂದವರು ರಂಜಾನ್ ಹಬ್ಬವನ್ನು ಬಹಳ ಸಡಗರ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ. ಇದೀಗ ರಂಜಾನ್ ತಿಂಗಳ ಕೊನೇಯ ದಿನಗಳಲ್ಲಿ ಹಬ್ಬ ಆಚರಿಸುವ ಸಲುವಾಗಿ ಅತ್ಯಂತ ಹೆಚ್ಚಿನ ರೀತಿಯಲ್ಲಿ ಮುಸ್ಲಿಂ ಭಾಂದವರು ಬಟ್ಟೆ ಬರೆ, ಚಪ್ಪಲು ಫ್ಯಾನ್ಸಿ, ತರಕಾರಿ, ಹಣ್ಣುಹಂಪಲು ಇನ್ನಿತರ ವ್ಯಾಪಾರ ಮಳಿಗೆಗಳಿಂದ ಖರೀದಿಮಾಡುತ್ತಿದ್ದು, ಪ್ರಸ್ತುತ ಸಮಯದಲ್ಲಿ ಸುಳ್ಯದಲ್ಲಿ ಅತೀ ಹೆಚ್ಚಿನ ತಾಪಮಾನ ಇರುವುದರಿಂದ ಹಗಲು ಹೊತ್ತಿನಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳು ವೃತದಾರಿಗಳಾಗಿದ್ದು ಖರೀದಿ ಮಾಡಲು ಪೇಟೆಗೆ ಬರಲು ಅನಾನುಕೂಲವಾಗುತ್ತಿದೆ. ಮಾತ್ರವಲ್ಲ ಕರ್ನಾಟಕದಲ್ಲಿಯೇ ಗರಿಷ್ಠ ತಾಪಮಾನ ಸುಳ್ಯದಲ್ಲಿ ದಾಖಲಾಗುವುದರಿಂದ ಹಗಲು ಹೊತ್ತಿನಲ್ಲಿ ವಸ್ತು ಖರೀದಿ ಮಾಡಲು ಬರುವ ಗ್ರಾಹಕರು ನಿರ್ಜಲೀಕರಣ ಮತ್ತು ಇನ್ನಿತರ ಅನಾರೋಗ್ಯಕ್ಕೆ ಈಡಾಗುವ ಸಂಭವ ಉಂಟಾಗಬಹುದು.
ಆದುದರಿಂದ ಸುಳ್ಯ ವೃತ್ತ ವ್ಯಾಪ್ತಿಯಲ್ಲಿ ಈ ಮೊದಲಿನ ವರ್ಷಗಳಲ್ಲಿ ನಾಲ್ಕು ದಿವಸಗಳ ಕಾಲ ರಾತ್ರಿ ಹೊತ್ತು ವ್ಯಾಪಾರ ಮಾಡುತ್ತಾ ಬಂದಿದ್ದು ಇಂದಿನಿಂದ ಇನ್ನುಳಿದ 9 ದಿನಗಳವರೆಗೆ ರಾತ್ರಿ ಹೊತ್ತು ಸುಳ್ಯ,ಬೆಳ್ಳಾರೆ, ಕಲ್ಲುಗುಂಡಿ ಸುಳ್ಯ ಪೊಲೀಸು ವೃತ್ತ ವ್ಯಾಪ್ತಿಯ ಇನ್ನಿತರ ಪೇಟೆಗಳ) ಕಾರ್ಯಾಚರಿಸುತ್ತಿರುವ ವಸ್ತ್ರ, ಪಾದರಕ್ಷೆ, ಅಲಂಕಾರಿಕಾ, ಇನ್ನಿತರ ವಸ್ತು ಮಾರಾಟ ವಹಿವಾಟು ಮಳಿಗೆಗಳನ್ನು ರಾತ್ರಿ ಹೊತ್ತಿನವರೆಗೆ ವ್ಯಾಪಾರ ಮಾಡಲು ಸಮಯ ವಿಸ್ತರಿಸಿ ಅವಕಾಶ ನೀಡಬೇಕಾಗಿ ವಿನಂತಿ ಪತ್ರ ದಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಧರ್ಭದಲ್ಲಿ ಸಮಿತಿಯ ಅಧ್ಯಕ್ಷ ಉಮ್ಮರ್ ಕೆ ಎಸ್, ಮುಖಂಡರುಗಳಾದ ಹಾಜಿ ಮುಸ್ತಫಾ ಜನತಾ, ಶರೀಫ್ ಕಂಠಿ, ರಶೀದ್ ಜಟ್ಟಿಪಳ್ಳ, ಸಿದ್ಧಿಕ್ ಕೊಕ್ಕೊ, ಉನೈಸ್ ಪೆರಾಜೆ,ಇಕ್ಬಾಲ್ ಸುಣ್ಣ ಮೂಲೆ ಉಪಸ್ಥಿತರಿದ್ದರು.