ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಆಯೋಜಿಸಲ್ಪಡುತ್ತಿರುವ ಇನ್ಸ್ಪೈರ್ ಅವಾರ್ಡ್ ಕಾರ್ಯಕ್ರಮದಲ್ಲಿ ಸೈಂಟ್ ಜೋಸೆಫ್ ರ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ವಿಭಾಗದ 7ನೇ ತರಗತಿಯ ಬಿಪಿನ್ ಕುಮಾರ್ ಎಸ್ ಮತ್ತು ಶ್ರೀವತ್ಸ ಎಚ್ .ಸಿ ಆಯ್ಕೆಯಾದ ವಿದ್ಯಾರ್ಥಿಗಳು.
ಬಿಪಿನ್ ಕುಮಾರ್ ಎಸ್ ಬೆಟ್ಟಂಪಾಡಿ ಶಾಂತಿನಗರ ನಿವಾಸಿ ಶ್ರೀ ಸದಾನಂದ ಎಸ್ ಮತ್ತು ಉಮಾವತಿ ಪಿ ದಂಪತಿಯ ಪುತ್ರ ಹಾಗು ಶ್ರೀವತ್ಸ ಎಚ್ .ಸಿ ಪೈಚಾರ್ ನಿವಾಸಿ ಚಂದ್ರಶೇಖರ ಎಚ್.ಬಿ ಮತ್ತು ಹೇಮಾವತಿ ಬಿ ದಂಪತಿಯ ಪುತ್ರ ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿ,ಶಿಕ್ಷಕರು ಮತ್ತು ವಿದ್ಯಾರ್ಥಿ ವೃಂದ ಅಭಿನಂದಿಸಿದ್ದಾರೆ.