ಅರಂಬೂರು: ಬದ್ರ್ ಜುಮಾ ಮಸ್ಜಿದ್ ನಲ್ಲಿ ಗ್ರಾಂಡ್ ಇಫ್ತಾರ್ ಕೂಟ

0

ಅರಂಬೂರು: ಬದ್ರ್ ಜುಮ್ಮಾ ಮಸ್ಜಿದ್ ನಲ್ಲಿ ರಂಜಾನ್ ತಿಂಗಳ ಅಂಗವಾಗಿ ಬೃಹತ್ ಇಫ್ತಾರ್ ಕೂಟವನ್ನು ಆಯೋಜಿಸಲಾಗುತ್ತಿದೆ. ವಿಶೇಷವಾಗಿ ಪ್ರತಿದಿನ 300ಕ್ಕೂ ಹೆಚ್ಚು ವೃತದಾರಿಗಳು ಇಫ್ತಾರ್ ಕೂಟದಲ್ಲಿ ಭಾಗವಹಿಸುತ್ತಿದ್ದು ಅನ್ನಪ್ರಸಾದ ವಿತರಣೆ ಕಾರ್ಯಕ್ರಮವು ಕೂಡ ನಡೆಯುತ್ತಿದೆ.

ಸ್ಥಳೀಯ ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಹಾಜಿ ಎಸ್ ಭಾಷಾ ಸಾಹೇಬ್ ಅರಂಬೂರು ರವರ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ಇಫ್ತಾರ್ ಕೂಟ ನಡೆಯುತ್ತಿದೆ.

ಕಾರ್ಯಕ್ರಮದಲ್ಲಿ ಸ್ಥಳೀಯ ಕಮಿಟಿಯ ಗೌರವ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್, ಕಾರ್ಯದರ್ಶಿ ಕಲಂದರ್, ಕೋಶಾಧಿಕಾರಿ ಅಬ್ದುಲ್ ಖಾದರ್, ಸದಸ್ಯರುಗಳಾದ ಹಾಜಿ ಉಮ್ಮರ್, ಅಕ್ಬರ್ ಕರಾವಳಿ, ಕಮಾಲ್ ಹನಿಫಾ, ಯೂಸುಫ್ ಅಂಜಿ ಕಾರ್, ಹಮೀದ್ ಪಿ ಆರ್ ಅಬೂಬಕ್ಕರ್ ಎಂ ಎ, ಹಾಗೂ ಸ್ಥಳೀಯ ಯುವಕರ ಸಂಘಟನೆಯಾದ ಅಲ್ ಅಮೀನ್ ಯೂತ್ ಫ್ರೆಂಡ್ಸ್ ಇದರ ಅಧ್ಯಕ್ಷ ಅಬ್ದುಲ್ಲಾ ಕುಂ ಞಿ, ನಾಸಿರ್ ಪಾಲಡ್ಕ, ಆಸೀಫ್ ಪನ್ನೆ,ಅಬ್ದುಲ್ ರಜಾಕ್, ಅಂಝ ಅಂಜಿಕ್ಕಾರ್, ಲತೀಫ್ ಮೊದಲಾದವರು ಸಹಕಾರ ನೀಡುತಿದ್ದು ಯಶಸ್ವಿ ಕಾರ್ಯಕ್ರಮ ನಡೆಯುತ್ತಿದೆ.

ಸ್ಥಳೀಯ ಖತೀಬರಾದ ಮುಹಿನುದ್ದೀನ್ ಫೈಝಿಯವರು ಪ್ರಾರ್ಥನೆ ನೆರವೇರಿಸುತ್ತಿದ್ದು, ಪ್ರತಿ ಭಾನುವಾರ ಮಹಿಳೆಯಾರಿಗಾಗಿ ರಂಜಾನ್ ತರಬೇತಿ ಹಾಗೂ ಉಪನ್ಯಾಸವನ್ನು ನೀಡುತ್ತಿದ್ದಾರೆ.