Home Uncategorized ಇಂದು ಮತ್ತು ನಾಳೆ ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ

ಇಂದು ಮತ್ತು ನಾಳೆ ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ

0

ವಿಷ್ಣುಮೂರ್ತಿ ದೈವದ ಅತ್ಯಂತ ಎತ್ತರದ ಮೇಲೇರಿ ಕೂಡುವ ಕಾರ್ಯ

ದ.ಕ. ಸಂಪಾಜೆ ಗ್ರಾಮದ ಇತಿಹಾಸ ಪ್ರಸಿದ್ದ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಇಂದು ರಾತ್ರಿ ಮತ್ತು ನಾಳೆ ಬೆಳಿಗ್ಗೆ (28,29)ಜರುಗಲಿದ್ದು, ಅತ್ಯಂತ ಎತ್ತರದ ಮೇಲೇರಿ ಎಂಬ ಖ್ಯಾತಿ ಹೊಂದಿರುವ ಮೇಲೇರಿ ಕೂಡುವ ಕಾರ್ಯವು ನಡೆಯುತ್ತಿದೆ.

ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ಗದ್ದೆಯಲ್ಲಿ ಅತ್ಯಂತ ಎತ್ತರದ ಮೇಲೇರಿ ಕೂಡುವ ಕಾರ್ಯ ಜರುಗುತ್ತಿದ್ದು, ಅಂತಿಮ ಹಂತದಲ್ಲಿದೆ.

ಇಂದು ರಾತ್ರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಿಂದ ಶ್ರೀ ದೈವದ ಭಂಡಾರವನ್ನು ಒತ್ತೆಕೋಲ ಗದ್ದೆಗೆ ತರಲಾಗುವುದು. ಬಳಿಕ ಮೇಲೇರಿಗೆ ಅಗ್ನಿಸ್ಪರ್ಶ, ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಳ್ಳಾಟ ನಡೆಯಲಿದೆ.

ರಾತ್ರಿ ಅಪ್ಪು ಮೆಲೋಡಿಸ್ ಕುದ್ರೆಪಾಯ ತಂಡದಿಂದ ನಾಸಿಕ್ ಬ್ಯಾಂಡ್ ಮೊದಲ ಪ್ರದರ್ಶನ ನಡೆಯಲಿದೆ.

ಮಾ.29ರಂದು ಬೆಳಿಗ್ಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ, ಪ್ರಸಾದ ವಿತರಣೆ, ಮಾರಿಕಳ ಪ್ರವೇಶ, ಹರಿಕೆ ಒಪ್ಪಿಸುವ ಕಾರ್ಯಕ್ರಮವು ಜರುಗಲಿದೆ.

ಮಾ.30ರಂದು ಮಧ್ಯಾಹ್ನ ಪಂಜುರ್ಲಿ ಹಾಗೂ ಕಲ್ಲುರ್ಟಿ ಮತ್ತು ಗುಳಿಗ ದೈವಗಳಿಗೆ ಸಮ್ಮಾನ ನಡೆಯಲಿದೆ.

ಕೊಳ್ಳಿ ಕೂಡುವ ಕಾರ್ಯದಲ್ಲಿ ತೀಯ ಸಮಾಜದ ಭಕ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

NO COMMENTS

error: Content is protected !!
Breaking