Home Uncategorized ಸುಳ್ಯ ತಾಲೂಕಿನಾದ್ಯಂತ ಸಂಭ್ರಮ ಈದ್ ಆಚರಣೆ

ಸುಳ್ಯ ತಾಲೂಕಿನಾದ್ಯಂತ ಸಂಭ್ರಮ ಈದ್ ಆಚರಣೆ

0


ಮುಸ್ಲಿಂ ಭಾಂದವರು ರಂಜಾನ್ ಒಂದು ತಿಂಗಳ ಉಪವಾಸ ವೃತವನ್ನು ಕಾರ್ಯಗತವನ್ನು ಅದಕ್ಕೆ ಪವಿತ್ರ ತಿಂಗಳ ಪುಣ್ಣಕ್ಕಾಗಿ ದಾನ ಧರ್ಮಗಳ ಮೂಲಕ ದನ್ಯಗೊಳಿಸಿ ಇವತ್ತು ಸಂಭ್ರಮದ ಈದುಲ್ ಫಿತರ್ ಹಬ್ಬ ಸಂಭ್ರಮದಿಂದ ಆಚರಿಸಿದರು. ಸುಳ್ಯ ಗಾಂಧಿನಗರ ಮುಹ್ಯದ್ದೀನ್ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತರ್ ಹಬ್ಬದ ಸಲುವಾಗಿ ಈದ್ ಕುತುಬ ಮತ್ತು ಪಾರ್ಥನೆಯನ್ನು ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ಮಾಡಿದರು.


ಜಮಾಯತ್ ಅಧ್ಯಕ್ಷರಾದ ಹಾಜಿ ಮಹಮ್ಮದ್ ಕೆಎಂಎಸ್, ಸೂಡ ಅಧ್ಯಕ್ಷ ಹಾಜಿ ಕೆಎಂ ಮುಸ್ತಫಾ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಬ್ದುಲ್‌ ಹಮೀದ್ ಕುತ್ತಮೊಟ್ಟೆ, ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ ಎಸ್,ರಿಯಾಜ್ ಕಟ್ಟೆಕ್ಕಾರ್, ಶರೀಫ್ ಕಂಠಿ,ಸಿದ್ದೀಕ್ ಕೊಕ್ಕೊ,ಅನ್ಸಾರ್ ಅಧ್ಯಕ್ಷ ಅಬ್ದುಲ್ಲಾ ಹಾಜಿ ಕಟ್ಟೆಕ್ಕಾರ್, ಅನ್ಸಾರಿಯಾ ಅಧ್ಯಕ್ಷ ಅಬ್ದುಲ್‌ ಮಜೀದ್ ಜನತಾ,ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.


ಈದ್ ನಮಾಜ್ ಬಳಿಕ ಸೇರಿದವರಲ್ಲರೂ ಪರಸ್ಪರ ಹಸ್ತಲಾಘ ಮಾಡಿದರು.
ನಂತರ ಸಾಮೂಹಿಕ ಪಾರ್ಥನೆ ಮತ್ತು ಕಬರ್ ಝಿಯಾರತ್ ಕಾರ್ಯಕ್ರಮ ನಡೆಯಿತು. ನಂತರ ಮನೆ ಮನೆಗಳಿಗೆ ಭೇಟಿ ನೀಡಿ ಈದ್ ಸಂದೇಶ ನಿಡುವುದರ ಮೂಲಕ ಈದ್ ಆಚರಿಸಿದರು.

NO COMMENTS

error: Content is protected !!
Breaking