ಮಂಡೆಕೋಲು ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನ : ಜಾತ್ರೆಯ ಆಮಂತ್ರಣ ಬಿಡುಗಡೆ

0

ಮಂಡೆಕೋಲು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವರ ಜಾತ್ರೋತ್ಸವವು ಎಪ್ರಿಲ್ ತಿಂಗಳಲ್ಲಿ ನಡೆಯಲಿದ್ದು, ಆಮಂತ್ರಣ ಬಿಡುಗಡೆ ಸಮಾರಂಭ ಎ.2ರಂದು ಬೆಳಗ್ಗೆ ನಡೆಯಿತು.

ಬೆಳಗ್ಗೆ ದೇವಸ್ಥಾನದಲ್ಲಿ ಆಮಂತ್ರಣವನ್ನು ದೇವರ ಮುಂದೆ ಇಟ್ಟು ಪ್ರಾರ್ಥನೆ ಸಲ್ಲಿಸಲಾಯಿತು.

ಬಳಿಕ ದೇವಸ್ಥಾನದ ಮುಂಭಾಗದಲ್ಲಿ ಎಲ್ಲ ಸಮಿತಿಯವರಿದ್ದು ಆಮಂತ್ರಣ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ದಾಮೋದರ ಪಾತಿಕಲ್ಲು, ಪವಿತ್ರಪಾಣಿ ಕೇಶವ ಮೂರ್ತಿ ಹೆಬ್ಬಾರ್, ಕಳೇರಿ ಸಮಿತಿ ಅಧ್ಯಕ್ಷ ಪೂರ್ಣಚಂದ್ರ ಕಣೆಮರಡ್ಕ, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾಸ್ತರ್, ನೇಮೋತ್ಸವ ಸಮಿತಿ ಸಂಚಾಲಕ ಸುರೇಶ್ ಕಣೆಮರಡ್ಕ, ವ್ಯವಸ್ಥಾಪನಾ ಸಮಿತಿ ಶುಭಕರ ಬೊಳುಗಲ್ಲು, ಶಿವರಾಮ ಮಾಸ್ತರ್, ಸುಂದರ ನಾಯ್ಕ್, ವೇದಾವತಿ ಕೇನಾಜೆ, ವಿದ್ಯಾಶ್ರೀ ಹರ್ಷಿತ್, ಅರ್ಚಕರಾದ ಶಿವಪ್ರಸಾದ್, ಪ್ರಮುಖರಾದ ನಂಜಪ್ಪ ಗೌಡ ಕೇನಾಜೆ, ಬಾಲಚಂದ್ರ ದೇವರಗುಂಡ, ತುಳಸಿನಿ ದೇವರಗುಂಡ, ಜಾನಕಿ ಕಣೆಮರಡ್ಕ, ವಿನುತಾ ಪಾತಿಕಲ್ಲು, ಪುತ್ತು ಮಾಸ್ಟರ್, ಕೃಷ್ಣಪ್ಪ ಮಾಸ್ತರ್, ಗುರು ಹೆಬ್ಬಾರ್, ಹರಿಶ್ಚಂದ್ರ ಪಾತಿಕಲ್ಲು, ನಾರಾಯಣ ಗೌಡ ಮಾವಂಜಿ, ಬಾಲಕೃಷ್ಣ ಪಾತಿಕಲ್ಲು, ಚಂದ್ರಾವತಿ, ತಿರುಮಲ ಕೊಡಂಚಡ್ಕ, ಯತೀಶ್ ಕೇನಾಜೆ ಮೊದಲಾದವರಿದ್ದರು.