Home Uncategorized ಕಾರ್ಮಿಕ ಕಲ್ಯಾಣ ಮಂಡಳಿ : ಕೆ.ಪಿ.ಜಾನಿಯವರಿಗೆ ಐದು ಜಿಲ್ಲೆಗಳ ಉಸ್ತುವಾರಿ

ಕಾರ್ಮಿಕ ಕಲ್ಯಾಣ ಮಂಡಳಿ : ಕೆ.ಪಿ.ಜಾನಿಯವರಿಗೆ ಐದು ಜಿಲ್ಲೆಗಳ ಉಸ್ತುವಾರಿ

0

ಕರ್ನಾಟಕ ಸರ್ಕಾರದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸದಸ್ಯರಾದ ಕೆ.ಪಿ.ಜಾನಿಯವರನ್ನು ಮೈಸೂರು ವಿಭಾಗೀಯ ವ್ಯಾಪ್ತಿಯಲ್ಲಿ ಬರುವ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಕಾರ್ಮಿಕ ಕಲ್ಯಾಣ ಮಂಡಳಿಯ ಉಸ್ತುವಾರಿಗಳಾಗಿ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರ ಸೂಚನೆಯ ಮೇರೆಗೆ ನೇಮಕಗೊಳಿಸಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಭಾರತಿ ಡಿ. IAS ಅವರು ಆದೇಶವನ್ನು ಹೊರಡಿಸಿರುತ್ತಾರೆ.

ಈ ಐದು ಜಿಲ್ಲೆಗಳಲ್ಲಿ ಮಂಡಳಿಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕೆ.ಪಿ.ಜಾನಿಯವರಿಗೆ ಈ ಮಹತ್ತರ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

NO COMMENTS

error: Content is protected !!
Breaking