ಬೆಳ್ಳಾರೆ ಡಾ. ಕೆ. ಶಿವರಾಮ ಕಾರಂತ ಸ. ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕಿ ಕು.ಭಾಗಿರಥಿ ಮುರುಳ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಾದ ಸಚಿನ್ ರಾಜ್ ಶೆಟ್ಟಿ, ಅನಿಲ್ ರೈ, ಆನಂದ ಬೆಳ್ಳಾರೆ, ಓವಿನ್ ಪಿಂಟೋ, ಕರುಣಾಕರ ಆಳ್ವ, ಮುಸ್ತಾಫ, ಅನುಸೂಯ, ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವ ದಿನ ಅಭಿನಂದನೆ, ಬಿಸಿಯೂಟಕ್ಕೆ ದಾನಿಗಳ ಸಹಕಾರ, ದಿ/ಕೇಶವ ಭಟ್ ಸಭಾ ಭವನ ಅಭಿವೃದ್ಧಿ, ಹಾಗೂ ಇತರ ವಿಚಾರದ ಬಗ್ಗೆ ಚರ್ಚೆ ನಡೆಸಲಾಯಿತು.