ಗೂನಡ್ಕ : ನೂತನ ಬಸ್ ಸ್ಟಾಪ್ ಉದ್ಘಾಟನೆ

0


ಗೂನಡ್ಕ ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಮುಂಭಾಗದಲ್ಲಿ ರೋಟರಿ ಕ್ಲಬ್ ವತಿಯಿಂದ ನೂತನ ಬಸ್ ಸ್ಟಾಪ್ ನ್ನು ನಿರ್ಮಿಸಲಾಗಿದ್ದು ಇದರ ಉದ್ಘಾಟನಾ ಸಮಾರಂಭವು ಜರಗಿತು.


ಈ ಕಾರ್ಯಕ್ರಮವನ್ನು ಜಿಲ್ಲಾ ಗವರ್ನರ್ ರೋಟ್ರಿಯನ್ ವಿಕ್ರಂ ದತ್ತ ಉದ್ಘಾಟಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ರೋಟ್ರಿಯನ್ ಶಿವಪ್ರಸಾದ್ ಕೆ ವಿ ರೋಟರಿ ಕ್ಲಬ್ ವತಿಯಿಂದ ಮಾಡುವ ಮುಖ್ಯ ಕಾರ್ಯಕ್ರಮಗಳಲ್ಲಿ ಇದು ಒಂದಾಗಿದ್ದು ಸಂಸ್ಥೆಯ ಸಹಯೋಗದೊಂದಿಗೆ ಈ ಕೆಲಸವು ಸುಸೂತ್ರವಾಗಿ ನೆರವೇರಲು ಸಾಧ್ಯವಾಯಿತೆಂದು ನುಡಿದರು.


ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರಾದ ರೋಟ್ರಿಯನ್ ವಿಕ್ರಂ ದತ್ತ ಮತ್ತು ರೋಟರಿ ಕ್ಲಬ್ ಸುಳ್ಯ ಸಿಟಿ ಅದರ ಅಧ್ಯಕ್ಷರಾದ ರೋಟ್ರಿಯನ್ ಶಿವಪ್ರಸಾದ್ ಕೆ.ವಿ , ಸಂಸ್ಥೆಯ ಅಧ್ಯಕ್ಷರಾದ ಶ್ರೀ ರುಕ್ಮಯ್ಯದಾಸ್, ನಿರ್ದೇಶಕಿ ಲೀಲಾವತಿ ರುಕ್ಮಯ್ಯದಾಸ್ ಮತ್ತು ರೋಟರಿ ಕ್ಲಬ್ ನ ಎಲ್ಲಾ ಸದಸ್ಯರು, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ, ಸದಸ್ಯರಾದ ಜಿ. ಕೆ. ಹಮೀದ್, ಸೋಮಶೇಖರ ಕೊಯಿಂಗಾಜೆ, ಶಿಕ್ಷಕ ರಕ್ಷಕ ಸಂಘದ ಸದಸ್ಯರಾದ ಅಬುಸಾಲಿ ಪಿ. ಕೆ. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.