ಗುತ್ತಿಗಾರು ಲಯನ್ಸ್ ಕ್ಲಬ್ ಗೆ ಪ್ರಾಂತೀಯ ಅಧ್ಯಕ್ಷರ ಭೇಟಿಯ ಕಾರ್ಯಕ್ರಮ ಮಾ.29ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಗುತ್ತಿಗಾರಿನ ಅಧ್ಯಕ್ಷರಾದ ಕುಶಾಲಪ್ಪ ತುಂಬತ್ತಾಜೆ ವಹಿಸಿದ್ದರು. ಪ್ರಾಂತ್ಯೀಯ ಅಧ್ಯಕ್ಷರಾದ ಲ.ಗಂಗಾಧರ ರೈ ದೀಪ ಬೆಳಗಿಸಿ ಉದ್ಘಾಟಿಸಿದರು.
ಲ.ಬಿಟ್ಟಿ ನಿಡುನಿಲಂ ಸ್ವಾಗತಿಸಿ, ವೆಂಕಪ್ಪ ಕೇನಾಜೆ ವರದಿ ವಾಚಿಸಿದರು. ಪುರುಷೋತ್ತಮ ಮಾಣಿಯಾನಮನೆ ಧನ್ಯವಾದ ಸಲ್ಲಿಸಿದರು.ವೇದಿಕೆಯಲ್ಲಿ ಲ | ರೇಣುಕಾ ಸದನಾಂದ ಜಾಕೆ, ವಲಯ ಅಧ್ಯಕ್ಷರಾದ ರೂಪಶ್ರೀ ಜೆ. ರೈ ಹಾಗೂ ಅಮೃತ ಅಪ್ಪಣ್ಣ ಶುಭಾ ಹಾರೈಸಿದರು.
ವಿವಿಧ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ನೇರಳಾಡಿ ದೈವಸ್ಥಾನಕ್ಕೆ ಊಟದ ತಟ್ಟೆ ಕೊಡುಗೆಯನ್ನು ಲ.ಸನತ್ ಮುಳುಗಾಡು ಸರೋಜಿನಿ ಗಂಗಯ್ಯ ಮುಳುಗಾಡು ಮತ್ತು ಮನೆಯವರು ಪ್ರಾಯೋಜಕತ್ವದಲ್ಲಿ ನೀಡಲಾಯಿತು.
ಮಡಪ್ಪಾಡಿ ಶಾಲೆಗೆ ಊಟದ ತಟ್ಟೆಯನ್ನು ಲ. ನಿತ್ಯಾನಂದ ಮುಂಡೋಡಿ, ಲ. ಪಿ.ಸಿ.ಜಯ ರಾಮ, ಲ. ಕುಶಾಲಪ್ಪ ತುಂಬತ್ತಾಜೆ, ಲ. ಲೋಕಪ್ಪ ಶೀರಡ್ಕ, ಲ. ಆನಂದ ಅಂಬೆಕಲ್ಲುರವರ ಪ್ರಾಯೋಜಕತ್ವದಲ್ಲಿ ವಿತರಿಸಲಾಯಿತು.
ಬೆಂಡೋಡಿ ಅಂಗನವಾಡಿ ಕೇಂದ್ರಕ್ಕೆ ಕಪಾಟನ್ನು ಲ.ವಿಜಯ ಕುಮಾರ್ ಎಂ.ಡಿ. ಯವರ ಪ್ರಾಯೋಜಕತ್ವದಲ್ಲಿ ನೀಡಲಾಯಿತು.
ಪಾರ್ಶ್ವವಾಯು ಪೀಡಿತ ಮಹಿಳೆ ದೇವಿಕಾ ಗುತ್ತಿಗಾರು ಇವರಿಗೆ ಧನ ಸಹಾಯ ಲಯನ್ಸ್ ಕ್ಲಬ್ ಗುತ್ತಿಗಾರು ಇದರ ವತಿಯಿಂದ ಹಸ್ತಾಂತರ ನಡೆಯಿತು.
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ) ಗುತ್ತಿಗಾರುಇದರ ಚಂದ್ರಶೇಖರ ಕಡೋಡಿ ಯವರಿಗೆ ಧನ ಸಹಾಯ ಲ. ಸರೋಜಿನಿ ಗಂಗಯ್ಯ ಪ್ರಾಯೋಜಕತ್ವದಲ್ಲಿ ನೀಡಲಾಯಿತು.