ಕೊಡಗು ಸಂಪಾಜೆ ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕಾಲಾವಧಿ ಜಾತ್ರೋತ್ಸವವು ಏಪ್ರಿಲ್ 11 ಮತ್ತು 12 ರಂದು ವಿಜೃಂಭಣೆಯಿಂದ ನಡೆಯಲಿದೆ.
ಏ.11 ರಂದು ಬೆಳಿಗ್ಗೆ ಉಗ್ರಾಣ ತುಂಬಿಸುವುದು , ಪರಿವಾರ ದೈವಗಳ ತಂಬಿಲ,ಮಧ್ಯಾಹ್ನ ಮಹಾ ಪೂಜೆ , ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6 ಗಂಟೆಗೆ ತಂತ್ರಿಗಳ ಆಗಮನ , ದೇವತಾ ಪ್ರಾರ್ಥನೆ, ಪಶುಧಾನ ಪುಣ್ಯಾಹ, ಪ್ರಸಾದ ಶುದ್ಧಿ , ರಾಕ್ಷೋಘ್ನ , ವಾಸ್ತು ಹೋಮ ವಾಸ್ತು ಬಲಿ, ರಂಗ ಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಭಜನಾ ಕಾರ್ಯಕ್ರಮ , ಭರತ ನಾಟ್ಯ ವೈಭವ , ಸಾಂಸ್ಕ್ರತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ.
ಏಪ್ರಿಲ್ 12 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ , ಬಿಂಬ ಶುದ್ಧಿ, ಕಲಶ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಬಳಿಕ ಕುಣಿತ ಭಜನೆ, ಭರತ ನಾಟ್ಯ, ಭಜನಾ ಕಾರ್ಯಕ್ರಮ , ರಾತ್ರಿ 8 ರಿಂದ ದೀಪಾರಾಧನೆ , ಹಸುವಿನ ಪೂಜೆ, ಭೂತ ಬಲಿ, ಬಳಿಕ ಶ್ರೀ ದೇವರ ನೃತ್ಯ ಬಲಿ, ಬಟ್ಟಲು ಕಾಣಿಕೆ ಪ್ರಸಾದ ವಿತರಣೆ ನಡೆಯಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿ , ಸಿಬ್ಬಂದಿ ವರ್ಗ ತಿಳಿಸಿದ್ದಾರೆ.