ಭವಾನಿಶಂಕರ ಕಾನಡ್ಕರವರಿಗೆ ಶ್ರದ್ಧಾಂಜಲಿ – ವೈಕುಂಠಸಮಾರಾಧನೆ

0

ಅಮರಮುಡ್ನೂರು ಗ್ರಾಮದ ಕಾನಡ್ಕ ಮನೆ ದಿ.ದೇರಣ್ಣ ಗೌಡರವರ ಪುತ್ರ ಭವಾನಿಶಂಕರ ಕಾನಡ್ಕ ರವರು ಅಲ್ಪಕಾಲದ ಅಸೌಖ್ಯದಿಂದ ಮಾ. ೨೭ ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠಸಮಾರಾಧನೆ ಕಾರ್ಯಕ್ರಮವು ಎ.೦೭ ರಂದು ಕಾನಡ್ಕ ಮನೆಯಲ್ಲಿ ನಡೆಯಿತು.


ಯತೀಶ್ ಹಿರಿಯಡ್ಕ ಮತ್ತು ಪೆರುವಾಜೆಯ ಉಮೇಶ್ ಕೆ. ಎಂ. ಬಿ. ಕಾನಾವು ಕೂರೋಡಿ ಇವರು ದಿ.ಭವಾನಿಶಂಕರ ಕಾನಡ್ಕರವರ ಆದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನರು ದಿ.ಭವಾನಿಶಂಕರ ಕಾನಡ್ಕರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಪತ್ನಿ ಶ್ರೀಮತಿ ಕಸ್ತೂರಿ ಭವಾನಿಶಂಕರ ಕಾನಡ್ಕ, ಪುತ್ರರಾದ ಶಿವಪ್ರಸಾದ್ ಕಾನಡ್ಕ, ಸೀತಾರಾಮ ಕಾನಡ್ಕ, ನಿರಂಜನ್ ಕಾನಡ್ಕ,ಸೊಸೆಯಂದಿರಾದ ಶ್ರೀಮತಿ ಶ್ವೇತ ಶಿವಪ್ರಸಾದ್,ಶ್ರೀಮತಿ ನಿಮಿತ ಸೀತಾರಾಮ ಕಾನಡ್ಕ, ಸಹೋದರರಾದ ಶಿವರಾಮ ಕಾನಡ್ಕ, ತೀರ್ಥೇಶ್ವರ ಕಾನಡ್ಕ, ಸಹೋದರಿ ಶ್ರೀಮತಿ ವಿಮಲ ಸಂಜೀವ ಗೌಡ ,ನಿನ್ನಿಕಲ್ಲು ಮತ್ತು ಮೊಮ್ಮಕ್ಕಳು ಹಾಗೂ ಕಾನಡ್ಕ ಕುಟುಂಬಸ್ಥರು ಉಪಸ್ಥಿತರಿದ್ದರು.