ನೂಜಾಡಿಯಲ್ಲಿ ಗುಳಿಗ ದೈವ ಮತ್ತು ಕೊರಗಜ್ಜ ದೈವದ ನೇಮೋತ್ಸವ

0

ನೂಜಾಡಿ ವನದುರ್ಗಾ, ರಕ್ತೇಶ್ವರಿ, ಸಹ ಪರಿವಾರ ದೈವಗಳ ಹಾಗೂ ಸ್ವಾಮಿ ಕೊರಗಜ್ಜ ಸಾನಿಧ್ಯ ಇಲ್ಲಿ ಎ. 8 ಮತ್ತು 9 ರಂದು ನೂಜಾಡಿ ದೈವ ಸಾನಿದ್ಯ ದಲ್ಲಿ ವರ್ಷಂಪ್ರತಿ ಯಂತೆ ಗುಳಿಗ ಮತ್ತು ಕೊರಗಜ್ಜ ದೈವದ ನೇಮೋತ್ಸವವು ನಡೆಯಿತು.

ಎ.8 ರಂದು ರಾತ್ರಿ ಭಂಡಾರ ತೆಗೆದು ಮಂತ್ರವಾದಿ ಗುಳಿಗ ನೇಮೋತ್ಸವ, ಬಳಿಕ ಅನ್ನಸಂತರ್ಪಣೆ, ರಾತ್ರಿ ಕ್ಷೇತ್ರ ಪಾಲಕ ಗುಳಿಗ ದೈವದ ನೇಮೋತ್ಸವ,ಜೋಡು ಕೊರಗಜ್ಜ ದೈವದ ನೇಮೋತ್ಸವ ನಡೆದು ಬೆಳಿಗ್ಗೆ ಪ್ರಸಾದ ವಿತರಣೆ ನಡೆಯಿತು.

ಆರಾಧಕ ಗಂಗಾಧರ ನೂಜಾಡಿ, ಆನಂದ ನೂಜಾಡಿ ಸೇರಿದಂತೆ ಅನೇಕ ಭಕ್ತವೃಂದ ಉಪಸ್ಥಿತರಿದ್ದರು. ( ವರದಿ : ಎ ಎಸ್ ಎಸ್)