ತೊಡಿಕಾನ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕಂಪ್ಯೂಟರ್ ಮತ್ತು ಪ್ರಿಂಟರ್ ಉದ್ಘಾಟನೆ

0

ತೊಡಿಕಾನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಮತ್ತು ಪ್ರಿಂಟರ್ ಗಳ ಉದ್ಘಾಟನೆ ಎ. 18 ರಂದು ನಡೆಯಿತು.


ಸ್ಥಳೀಯರು, ಪ್ರಗತಿಪರ ಕೃಷಿಕರಾದ ಕೇಶವ ಪ್ರಸಾದ್ ಗುಂಡಿಗದ್ದೆ ಇವರ ಮನವಿ ಮೇರೆಗೆ ದಾವಣಗೆರೆ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಾಜಿಯವರು 2 ಲಕ್ಷ ಅನುದಾನ ನೀಡಿದ್ದರು. ಈ ಅನುದಾನದಲ್ಲಿ ಮೆಂಡಾ ಫೌಂಡೇಶನ್ ಮತ್ತು ಸೆಲ್ಕೋ ಸಹಯೋಗದಲ್ಲಿ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್, ಪ್ರಿಂಟರ್ ಅಳವಡಿಸಲಾಗಿತ್ತು.


ಸ್ಮಾರ್ಟ್ ಕ್ಲಾಸ್ ಅನ್ನು ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಉದ್ಘಾಟಿಸಿದರು. ಕಂಪ್ಯೂಟರ್ ಗಳ ಉದ್ಘಾಟನೆಯನ್ನು ಆರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ನೆರವೇರಿಸಿದರು. ಪ್ರಿಂಟರ್ ಅನ್ನು ಕೃಷಿಕರಾದ ಕೇಶವ ಪ್ರಸಾದ್ ಗುಂಡಿಗದ್ದೆ ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ. ಎಂ ಸಿ. ಉಪಾಧ್ಯಕ್ಷೆ ಸೌಮ್ಯ ಭಟ್ ವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ದಾಖಲಾತಿ ಕರಪತ್ರವನ್ನು ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಪಂಜಿಕೋಡಿ ಬಿಡುಗಡೆಗೊಳಿಸಿದರು.


ಎಂ ಎಲ್ ಸಿ ಮೋಹನ್ ಕೊಂಡಾಜಿ ಯವರಿಂದ ಅನುದಾನವನ್ನು ಶಾಲೆಗೆ ತರಿಸಿದ ಕೇಶವ ಪ್ರಸಾದ್ ಗುಂಡಿಗದ್ದೆಯವರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಎಸ್. ಡಿ ಎಂ. ಸಿ. ಮಾಜಿ ಅಧ್ಯಕ್ಷ ತಿಮ್ಮಯ್ಯ ಮೆತ್ತಡ್ಕ ವೇದಿಕೆಯಲ್ಲಿದ್ದರು. ಶಾಲಾ ಮುಖ್ಯಶಿಕ್ಷಕ ಅರುಣ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಹ ಶಿಕ್ಷಕಿ ಮಮತಾ ಪರಿಚಯ ಭಾಷಣ ಮಾಡಿದರು. ಸಹ ಶಿಕ್ಷಕ ಬಲರಾಜ್ ವಂದಿಸಿದರು. ಶಿಕ್ಷಕಿ ಸ್ನೇಹಲತಾ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿಯರಾದ ನಾಗವೇಣಿ, ವಿದ್ಯಾಶ್ರೀ, ಅಡುಗೆ ಸಿಬ್ಬಂದಿಗಳು ಸಹಕರಿಸಿದರು.


ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರು, ಶಾಲಾ ವಿದ್ಯಾರ್ಥಿಗಳ ಪೋಷಕರು, ಗ್ರಾಮಸ್ಥರು ಭಾಗವಹಿಸಿದ್ದರು.