ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಶ್ರೀ ಉಳ್ಳಾಕುಲು, ಉಳ್ಳಾಳ್ತಿ, ಬಚ್ಚನಾಯಕ, ದೈವಸ್ಥಾನ ಯೇನೆಕಲ್ಲು ಇದರ ವಾರ್ಷಿಕ ಜಾತ್ರೋತ್ಸವವು ಏ. 2ರ ತನಕ ವಿಜೃಂಭಣೆಯಿಂದ ಜರಗಲಿದೆ.
ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮಾ. 27ರಂದು ಸಂಜೆ ಭಜನೆ, ರಂಗಪೂಜೆ, ಶ್ರೀ ಭೂತಬಲಿ ಉತ್ಸವ, ವಸಂತಕಟ್ಟೆ ಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಇಂದು (ಮಾ. 28) ಪೂ. 9.00ರಿಂದ ಮಹಾಗಣಪತಿ ಹೋಮ, ಶ್ರೀ ದೇವರ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಲಿದೆ.
ಶ್ರೀ ಉಳ್ಳಾಕುಲು, ಉಳ್ಳಾಳ್ತಿ, ಬಚ್ಚನಾಯಕ ದೈವಸ್ಥಾನದಲ್ಲಿ ಮಾ. 29ರಂದು ಸಂಜೆ 6 ರಿಂದ ಉಗ್ರಾಣ ತುಂಬಿಸುವುದು, ಮುಹೂರ್ತ ತೋರಣ, ಉಳ್ಳಾಕುಲು ವಗೈರೆ ದೈವಗಳು ನೇಮೋತ್ಸವ ನಡೆಯಲಿದೆ. ಮಾ. 30ರಂದು ರಾತ್ರಿ 8ರಿಂದ ಉಳ್ಳಾಳ್ತಿ ವಗೈರೆ ದೈವಗಳ ನೇಮೋತ್ಸವ ಜರಗಲಿದೆ. ಮಾ. 31ರಂದು ರಾತ್ರಿ 7 ಗಂಟೆಯಿಂದ ಭಂಡಾರ ಬಂದು ಉಡ್ಡೋತ್ತಾರು ಕುಮಾರ ದೈವಗಳ ನೇಮೋತ್ಸವ ನಡೆಯಲಿದೆ. ಏ. 01ರಂದು ಬೆಳಿಗ್ಗೆ 6ರಿಂದ ಶ್ರೀ ಬಚ್ಚನಾಯಕ ದೈವ ನಂತರ ಕೋಟಿನಾಯಕ ದೈವದ ನೇಮೋತ್ಸವ ನಡೆಯಲಿದೆ. ರಾತ್ರಿ 8 ರಿಂದ ಪ್ರಧಾನಿ ವಗೈರೆ ನೇಮ, ಬಳಿಕ ಭಂಡಾರ ಹೊರಟು ಏ. 2ರಂದು ರಾತ್ರಿ 8ರಿಂದ ಗುಳಿಗ ದೈವದ ನೇಮೋತ್ಸವ ನಡೆಯಲಿದೆ. ಮಾ. 31ರಂದು ಸಂಜೆ 6.00 ಗಂಟೆಯಿಂದ ವೈಷ್ಣವಿ ಸುಗಮ ಸಂಗೀತ ಬಳಗ ಮಂಗಳೂರು ಇವರಿಂದ ಸುಗಮ ಸಂಗೀತ ಬಳಿಕ ವಿಟ್ಲದ ಶ್ರೀ ದುರ್ಗಾ ಕಲಾ ತಂಡದಿಂದ ಕಾಂಚನ ಎಂಬ ಸಾಮಾಜಿಕ ನಾಟಕ ನಡೆಯಲಿದೆ.



ಏ. 20ರಂದು ಮಧ್ಯಾಹ್ನ ಶ್ರೀ ದೇವರ ಪ್ರತಿಷ್ಠಾ ದಿವಸದ ಅಂಗವಾಗಿ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ, ರಾತ್ರಿ 7.30ರಿಂದ ರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಚಿತ್ರ: ಪ್ರಶಾಂತ್ ದೋಣಿಮನೆ