ಪಂಬೆತ್ತಾಡಿ: ಸುದ್ದಿ ಸುಳ್ಯ ಹಬ್ಬ ಪ್ರಯುಕ್ತ ‘ ನಮ್ಮ ಗ್ರಾಮ – ನಮ್ಮ ಹೆಮ್ಮೆ’ ಅಭಿಯಾನ

0

ಗ್ರಾಮ ಮಟ್ಟದ ಸಭೆ – ಸಮಿತಿ ರಚನೆ : ಅಧ್ಯಕ್ಷರಾಗಿ ಮಹೇಶ್ ಕುಮಾರ್ ಕರಿಕ್ಕಳ ಆಯ್ಕೆ

ಸುಳ್ಯ ತಾಲೂಕಿಗೆ 60 ವರ್ಷ ಹಾಗೂ ಸುದ್ದಿಗೆ 40 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸುದ್ದಿ ಸುಳ್ಯ ಹಬ್ಬ ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಅದರ ಅಂಗವಾಗಿ ‘ ನಮ್ಮ ಗ್ರಾಮ – ನಮ್ಮ ಹೆಮ್ಮೆ’ ಅಭಿಯಾನ ಪ್ರತೀ ಗ್ರಾಮಗಳಲ್ಲಿ ನಡೆಯಲಿದ್ದು, ಪಂಬೆತ್ತಾಡಿ ಗ್ರಾಮದಲ್ಲಿ ಈ ಅಭಿಯಾನ ನಡೆಸುವ ಬಗ್ಗೆ ಪೂರ್ವಭಾವಿ ಸಮಾಲೋಚನಾ ಸಭೆ ಮಾ. 28 ರಂದು ಪಂಬೆತ್ತಾಡಿ ಪ್ರಾ.ಕೃ.ಪ.ಸಹಕಾರಿ ಸಂಘದ ಆವರಣದಲ್ಲಿ ನಡೆಯಿತು.

ಪಂಬೆತ್ತಾಡಿ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಅಧ್ಯಕ್ಷತೆ ವಹಿಸಿದ್ದರು.

ಸುದ್ದಿ ಪತ್ರಿಕೆಯ ವರದಿಗಾರ ಈಶ್ವರ ವಾರಣಾಶಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಸುದ್ದಿ ಸುಳ್ಯ ಹಬ್ಬ ಮತ್ತು ನಮ್ಮ ಗ್ರಾಮ ನಮ್ಮ ಹೆಮ್ಮೆ ಅಭಿಯಾನದ ಬಗ್ಗೆ ಸಭೆಗೆ ವಿವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹೇಶ್ ಕುಮಾರ್ ಕರಿಕ್ಕಳ , ಪಂಬೆತ್ತಾಡಿ ಸಣ್ಣ ಗ್ರಾಮವಾದರೂ ಇಲ್ಲಿಯ ವಿಶೇಷತೆಗಳು ಸುಳ್ಯ ಹಬ್ಬದ ಮೂಲಕ ದಾಖಲೀಕರಣವಾಗಬೇಕು. ಪ್ರಪಂಚಮುಖಕ್ಕೆ ಅನಾವರಣಗೊಳ್ಳಬೇಕು. ಮಾಧ್ಯಮಗಳ ನಡುವೆ ಪೈಪೋಟಿ ಇರುವಾಗ ಪತ್ರಿಕೆಯನ್ನು ನಡೆಸುವಂತದ್ದು ಸುಲಭದ ಮಾತಲ್ಲ. ಸುದ್ದಿ ಪತ್ರಿಕೆ ಇವತ್ತು 40 ವರ್ಷ ಪೂರೈಸಿರುವಂತದ್ದು ನಮ್ಮ ತಾಲೂಕಿಗೆ ಹೆಮ್ಮೆ ಎಂದರು.

ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಜಾಕೆ ಮಾಧವ ಗೌಡರು ಮಾತನಾಡಿ, ಸುದ್ದಿಗೆ 40, ಸುಳ್ಯಕ್ಕೆ 60 ಕಾರ್ಯಕ್ರಮ ಪ್ರಯುಕ್ತ ಸುಳ್ಯ ಹಬ್ಬ ಮಾಡುವಾಗ ನಾವು ಪೂರ್ಣ ಸಹಕಾರ ನೀಡಬೇಕು. ನಮ್ಮ ಊರಿನ ದಾಖಲೀಕರಣವಾದರೆ ಅದು ನಮ್ಮ ಗ್ರಾಮದ ಹೆಮ್ಮೆ. ಮುಂದಿನ ದಿನಗಳಲ್ಲಿ ಊರವರನ್ನೆಲ್ಲಾ ಕರೆದು ಸಭೆ ನಡೆಸಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸೋಣ ಎಂದರು.

ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪುರುಷೋತ್ತಮ ಶೆಟ್ಟಿ, ಉಪಾಧ್ಯಕ್ಷ ಗಣೇಶ್ ಭೀಮಗುಳಿ ವೇದಿಕೆಯಲ್ಲಿದ್ದರು.

ಸಂಘದ ನಿರ್ದೇಶಕರಾದ ಧರ್ಮಣ್ಣ ನಾಯ್ಕ ಗರಡಿ, ಸಂತೋಷ್ ಜಾಕೆ, ವೆಂಕಪ್ಪ ಎನ್.ಪಿ, ಕೆ. ಗುರುವಪ್ಪ, ದಿಲೀಪ್ ಬಾಬ್ಲುಬೆಟ್ಟು, ಮೂಕಾಂಬಿಕಾ ಭಟ್, ಶ್ರೀರಂಜಿನಿ, ಲವಕುಮಾರ್, ಧನಂಜಯ, ಕಲ್ಮಡ್ಕ ಗ್ರಾ.ಪಂ. ಸದಸ್ಯೆ ಪವಿತ್ರ ಮಲ್ಲೇಟಿ, ಗ್ರಾಮಸ್ಥರಾದ ಜಯರಾಮ ಬೆಳಗಜೆ, ಲಲಿತಾ ಬಾಬ್ಲುಬೆಟ್ಟು, ದಮಯಂತಿ ಜಿ, ರಾಜೇಶ್ವರಿ ಡಿ.ಎಲ್, ಮಮತಾ ಕೆ, ಶ್ರೀಮತಿ ನಳಿನಿ, ರೋಹಿತ್, ಹೇಮಲತಾ ಕಲ್ಚಾರ್, ಧನಲಕ್ಷ್ಮೀ ಎಂ, ಸಂಘ ಸಿಬ್ಬಂದಿಗಳಾದ ಜಿ. ಹೊನ್ನಪ್ಪ ನಾಯ್ಕ, ಉಮೇಶ್ ಎಂ, ನೇಮಿರಾಜ್ ಪಿ, ಜಯಂತಿ ಎಂ, ಸುದ್ದಿ ಏಜೆಂಟರಾದ ಗೋಪಾಲ ಪಂಬೆತ್ತಾಡಿ ಮತ್ತು ಜಯಂತ ಪಂಬೆತ್ತಾಡಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಮಿತಿ ರಚನೆ:


ಈ ಸಂದರ್ಭದಲ್ಲಿ ಗ್ರಾಮ ಸಮಿತಿ ರಚನೆಯಾಗಿದ್ದು, ಗೌರವಾಧ್ಯಕ್ಷರಾಗಿ ಜಾಕೆ ಮಾಧವ ಗೌಡ, ಅಧ್ಯಕ್ಷರಾಗಿ ಮಹೇಶ್ ಕುಮಾರ್ ಕರಿಕ್ಕಳ, ಕಾರ್ಯಾಧ್ಯಕ್ಷರಾಗಿ ಪವಿತ್ರಾ ಕುದ್ವ, ಸಂಚಾಲಕರಾಗಿ ಸಂತೋಷ್ ಜಾಕೆ, ಸಹ ಸಂಚಾಲಕರಾಗಿ ಗಣೇಶ್ ಭೀಮಗುಳಿ, ಖಜಾಂಚಿಯಾಗಿ ರಜಿತ್ ಭಟ್ ಪಂಜಬೀಡು, ಸಂಯೋಜಕರಾಗಿ ದಿಲೀಪ್ ಬಾಬ್ಲುಬೆಟ್ಟು, ಧರ್ಮಣ್ಣ ನಾಯ್ಕ ಗರಡಿ, ಪ್ರಧಾನ ಕಾರ್ಯದರ್ಶಿಯಾಗಿ ತೀರ್ಥಾನಂದ ಕೊಡೆಂಕಿರಿ, ಜತೆ ಕಾರ್ಯದರ್ಶಿಯಾಗಿ ಶ್ರೀರಂಜಿನಿ ಪಂಜಬೀಡು, ಉಪಾಧ್ಯಕ್ಷರಾಗಿ ಶ್ರೀಮತಿ ಮೂಕಾಂಬಿಕಾ ಭಟ್, ವೆಂಕಪ್ಪ ಎನ್.ಪಿ, ರೋಹಿತ್ ಚೀಮುಳ್ಳು, ಲಲಿತಾ ಬಾಬ್ಲುಬೆಟ್ಟು, ಜಯಂತ ಪಂಬೆತ್ತಾಡಿ, ಗುರುವಪ್ಪ ಕಲ್ಚಾರ್, ಧನಂಜಯ, ರಮ್ಯಾ ದಿಲೀಪ್ ಬಾಬ್ಲುಬೆಟ್ಟು, ಲವಕುಮಾರ್, ಹೇಮಲತಾ ಕಲ್ಚಾರ್, ರೋಹಿತ್ ಆಚಾರ್ಯ, ಜಯಂತ ಪಂಬೆತ್ತಾಡಿ, ರತಿದೇವಿ ಜಾಕೆ, ಧನಲಕ್ಷ್ಮಿ, ಶ್ರೀಮತಿ ನಳಿನಿ, ಮಮತಾ ಕೆ, ರಾಜೇಶ್ವರಿ ಡಿ.ಎಲ್, ದಮಯಂತಿಯವರನ್ನು ಆಯ್ಕೆ ಮಾಡಲಾಯಿತು.