Home ಪ್ರಚಲಿತ ಸುದ್ದಿ ನ.ಪಂ.ಸದಸ್ಯ ಶರೀಫ್ ಕಂಠಿಯವರನ್ನು ಬಂಧಿಸುವಂತೆ ಸಂಘಟನೆಯವರಿಂದ ವೃತ್ತ ನಿರೀಕ್ಷರಿಗೆ ಮನವಿ

ನ.ಪಂ.ಸದಸ್ಯ ಶರೀಫ್ ಕಂಠಿಯವರನ್ನು ಬಂಧಿಸುವಂತೆ ಸಂಘಟನೆಯವರಿಂದ ವೃತ್ತ ನಿರೀಕ್ಷರಿಗೆ ಮನವಿ

0

ಬಂಧನವಾಗದಿದ್ದಲ್ಲಿ ಮಾ.31 ರಂದು ಠಾಣೆಯ ಎದುರು ಪ್ರತಿಭಟನೆಯ ನಿರ್ಧಾರ

ಸುಳ್ಯದ ನಾವೂರಿನ ಶ್ರೀಮತಿ ಚಂದ್ರಿಕಾ ಎಂಬ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಯವರ ಮೇಲೆ ಮಾ.26 ರಂದು ಎಫ್.ಐ.ಆರ್ ದಾಖಲಾಗಿದ್ದು ಈ ತನಕ ಬಂಧಿಸದೇ ಇರುವುದನ್ನು ಖಂಡಿಸಿ ಶೀಘ್ರವಾಗಿ ಆತನನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂ ಪರ ಸಂಘಟನೆಯವರು ಸುಳ್ಯದ ವೃತ್ತ ನಿರೀಕ್ಷರಿಗೆ ಮಾ.28 ರಂದು ಮನವಿ ಸಲ್ಲಿಸಿದರು.

ಮಾ.30 ರ ಒಳಗಾಗಿ ಆರೋಪಿ ಸ್ಥಾನದಲ್ಲಿರುವ ಶರೀಫ್ ಕಂಠಿಯವರನ್ನು ಬಂಧಿಸಬೇಕು ಇಲ್ಲವಾದಲ್ಲಿ ಮಾ.31 ರಂದು ಪೊಲೀಸ್ ಠಾಣೆಯ ಎದುರುಗಡೆ ಎಲ್ಲಾ ಪರಿವಾರ ಸಂಘಟನೆಯವರು
ಸೇರಿ ಪ್ರತಿಭಟನೆ ನಡೆಸಲಿದ್ದೇವೆ. ಶೀಘ್ರವಾಗಿ ಇಲಾಖೆ ಕಾರ್ಯನ್ಮೋಖರಾಗಿ ಆರೋಪಿಯನ್ನು ಬಂಧಿಸಬೇಕೆಂದು ಒತ್ತಾಯಿಸಿ ಮನವಿ ಪತ್ರವನ್ನು ಸರ್ಕಲ್ ಇನ್ಸ್ ಪೆಕ್ಟರ್ ತಿಮ್ಮಪ್ಪ ನಾಯ್ಕ್ ರವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ,ಮಾತೃಶಕ್ತಿ ದುರ್ಗಾವಾಹಿನಿ ಸುಳ್ಯ ಪ್ರಖಂಡದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಮಹಿಳೆಯರು ಸೇರಿದಂತೆ ಸುಮಾರು
50 ಕ್ಕೂ ಮಿಕ್ಕಿ ಕಾರ್ಯಕರ್ತರು ಉಪಸ್ಥಿತರಿದ್ದರು.

NO COMMENTS

error: Content is protected !!
Breaking