ಸರಕಾರಿ ಪ್ರಥಮ ದರ್ಜೆ ಕಾಲೇಜ ಸುಳ್ಯ ಇಲ್ಲಿ ಸರಕಾರದ ಆದೇಶದಂತೆ, ವಿಶ್ವ ಜಲ ದಿನ ೨೦೨೫ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್‍ಯಕ್ರಮವು ನಡೆಯಿತು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ವತಿಯಿಂದ ಮಾ. ೨೧ರಂದು ಕಾವೇರಿ ಆರತಿ ಎಂಬ ಬೃಹತ್ ಕಾರ್‍ಯಕ್ರಮದಲ್ಲಿ ವಿಶ್ವ ಜಲ ದಿನದ ಅಂಗವಾಗಿ ಜಲಸಂರಕ್ಷಣೆ ಕುರಿತು ವಿಶ್ವದ ಬೃಹತ್ ಪ್ರತಿಜ್ಞಾವಿಧಿ ಸ್ವೀಕಾರ ಮಾಡುವ ಕಾರ್‍ಯಕ್ರಮಕ್ಕೆ ಈಗಾಗಲೇ ಸರಕಾರದ ಮಟ್ಟದಲ್ಲಿ ಚಾಲನೆ ನೀಡಲಾಗಿದ್ದು, ಅದರಂತೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯದಲ್ಲಿ ಮಾ ೨೭ರಂದು ಈ ಕಾರ್‍ಯಕ್ರಮ ನಡೆಯಿತು.




ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಪ್ರತಿಜ್ಞಾ ವಿಧಿ ಸ್ವೀಕರಿಸಿ, ಪ್ರತಿಜ್ಞಾ ವಿಧಿ ಸ್ವೀಕರಿಸಿದ ಅರ್ಜಿಗಳನ್ನು ಭರ್ತಿಮಾಡಿ ಸಹಿಯೊಂದಿಗೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ನೋಡಲ್ ಅಧಿಕಾರಿ ರಾಮಕೃಷ್ಣ ಕೆ ಎಸ್ ಸರ್ವರನ್ನು ಸ್ವಾಗತಿಸಿದರು. ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್‍ಯಕ್ರಮದಲ್ಲಿ ಸಹಕರಿಸಿದರು.