ಸೇತುವೆ, ರಸ್ತೆಗೆ ಗುದ್ದಲಿ ಪೂಜೆ, ಶೌಚಾಲಯ ಉದ್ಘಾಟನೆ

ಕೊಲ್ಲಮೊಗ್ರು ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳು ಸೇರಿ ಸುಮಾರು1.92 ಕೋಟಿ ಕಾಮಗಾರಿಗಳ ಶಂಕುಸ್ಥಾಪನೆ ಮಾ.27 ರಂದು ನೆರವೇರಿತು.
ಶಾಸಕಿ ಭಾಗೀರಥಿ ಮುರುಳ್ಯ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದರು.





ಕೊಲ್ಲಮೊಗ್ರು ಪೇಟೆಯಲ್ಲಿ 1 ಕೋಟಿ ವೆಚ್ಚದ ಸೇತುವೆ, ಗಡಿಕಲ್ಲಿನಲ್ಲಿ 25 ವೆಚ್ಚದ ತಡೆಗೋಡೆ, ಕೊಲ್ಲಮೊಗ್ರು- ಕುಂಟುಕಾಡು 10 ಲಕ್ಷ ವೆಚ್ಚದ ರಸ್ತೆ ಕಾಂಕ್ರೀಟ್, 20 ಲಕ್ಷ ವೆಚ್ಚದ ಮಳ್ಳಾಜೆ ಕೋಲೆಕಾನ ರಸ್ತೆ ಕಾಂಕ್ರೀಟ್, 20 ಲಕ್ಷ ವೆಚ್ಚದ ಬೆಂಡೋಡಿ ಅಂಗನವಾಡಿ ಇವುಗಳ ಶಂಕುಸ್ಥಾಪನೆ ನೆರವೇರಿತು. ಅಲ್ಲದೆ ಕಡಂಬಳ ಬಳಿ 5 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ, ಬೆಂಡೋಡಿ ಬಳಿ 7 ಲಕ್ಷ ವೆಚ್ಷದ ಎಂ..ಆರ್.ಪಿ.ಎಲ್ ನವರಿಂದ ಕೊಡಲ್ಪಟ್ಟ ಶೌಚಾಲಯ, ಬೆಂಡೋಡಿ ಬಳಿ 5 ಲಕ್ಷ ವೆಚ್ಚದ ಸಾರ್ವಜನಿಕ ಶೌಚಾಲಯಗಳು ಉದ್ಘಾಟನೆಗೊಂಡವು. ಈ ಸಂದರ್ಭ ಕೊಲ್ಲಮೊಗ್ರು ಗ್ರಾ.ಪಂ ಅಧ್ಯಕ್ಷೆ ಮೋಹಿನಿ ಕಟ್ಟ, ಉಪಾಧ್ಯಕ್ಷ ಮಾದವ ಚಾಂತಾಳ, ಗ್ರಾ.ಪಂ ಸದಸ್ಯರಾದ ಅಶ್ವಥ್ ಯಲದಾಳು, ಪುಷ್ಪರಾಜ್ ಪಡ್ಪು, ಬಾಲಸುಬ್ರಹ್ಮಣ್ಯ ಭಟ್, ಜಯಶ್ರೀ ಚಾಂತಾಳ ಮುಖಂಡರಾದ ವೆಂಕಟ್ ವಳಲಂಬೆ, ಮುಳಿಯ ಕೇಶವ ಭಟ್, ಕೃಷ್ಣಯ್ಯ ಮೂಲೆತೋಟ, ಹರೀಶ್ ಕಂಜಿಪಿಲಿ, ಗಣೇಶ್ ಭಟ್ ಇಡ್ಯಡ್ಕ, ಡ್ಯಾನಿ ಯಲದಾಳು, ಕಮಲಾಕ್ಷ ಮುಳ್ಳುಬಾಗಿಲು, ಹೂವಪ್ಪ ಸಂಪ್ಯಾಡಿ, ಹರ್ಷ ಬಳ್ಳಡ್ಕ, ಜಯರಾಮ ಗೊಳ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.
