ಅರ್ಗುಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

0

ಅರ್ಗುಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಇಂದು (ಮಾ. 31ರಂದು) ನಡೆಯಿತು.


ಬೆಳಿಗ್ಗೆ ಗಣಪತಿ ಹೋಮ, ಪಂಚವಿಂಶತಿ
ಕಲಶಾಭಿಷೇಕ, ಏಕರುದ್ರಾಭಿಷೇಕ, ನಾಗದೇವರಿಗೆ ಮತ್ತು ದೈವಗಳಿಗೆ ತಂಬಿಲ. ಮಧ್ಯಾಹ್ನ ಗಂಟೆ 12.00ಕ್ಕೆ
ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ದೇವಸ್ಥಾನದಲ್ಲಿ ಹಲವು‌ ವರ್ಷಗಳಿಂದ ಸಹಾಯಕರಾಗಿ ಸೇವೆ ಸಲ್ಲಿಸಿದ ಸ್ಥಳೀಯರಾದ ಸಂಜೀವ ಗೌಡರನ್ನು ಅವರ ಪತ್ನಿ ಶ್ರೀಮತಿ ವೆಂಕಮ್ಮೆರೊಂದಿಗೆ ಗೌರವಿಸಲಾಯಿತು.


ದೇವಸ್ಥಾನದ ಆಡಳಿತಾಧಿಕಾರಿ, ಬಳ್ಪ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಾರಾಯಣ ಬಟ್ಟೋಡಿ, ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಭಟ್ ಕಾಯಂಬಾಡಿ, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಕಾರ್ಜ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಲಿಂಗಪ್ಪ ರೈ ಅರ್ಗುಡಿ, ಉದ್ಯಮಿ ಸದಾನಂದ ರೈ ಅರ್ಗುಡಿ, ಚಂದ್ರಶೇಖರ ಕಟ್ಟ, ಹರೀಶ್ ಕಾರ್ಜ, ಕೇಶವ ಕಾರ್ಜ, ರಾಧಾಕೃಷ್ಣ ರೈ ಅರ್ಗುಡಿ, ಮಂಜುನಾಥ ಕಟ್ಟ, ಗಂಗಯ್ಯ ಅರ್ಗುಡಿ, ಶಿವಣ್ಣ ಕಲುಂಗುಡಿ ಸೇರಿದಂತೆ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾತ್ರಿ ಗಂಟೆ 8.00ಕ್ಕೆ ಶ್ರೀ ದೇವರಿಗೆ ರಂಗಪೂಜೆ,
ದುರ್ಗಾ ನಮಸ್ಕಾರ ಪೂಜೆ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ ನಡೆಯಲಿದೆ. ಸಂಜೆ 7.00 ಗಂಟೆಯ ತನಕ ಭಜನಾ
ಕಾರ್ಯಕ್ರಮ ನಡೆಯಲಿದೆ.