ಸುಳ್ಯ ಪೇಟೆಯಲ್ಲಿ ಚಿನ್ನದ ಬ್ರೆಸ್ ಲೆಟ್ ಕಳೆದುಹೋಗಿದ್ದು ಸಿಕ್ಕಿದವರು ಹಿಂತಿರುಗಿಸಬೇಕೆಂದು ಕಳೆದುಕೊಂಡವರು ಮನವಿ ಮಾಡಿದ್ದಾರೆ.
ಪೇರಾಲಿನ ಶ್ರೀಧರ ಆಚಾರ್ಯ ಎಂಬವರು ಸುಳ್ಯ ಸಿ.ಎ.ಬ್ಯಾಂಕ್ ನಲ್ಲಿ ಅಡವಿರಿಸಿದ ಸುಮಾರು ಮುಕ್ಕಾಲು ಪವನಿನ ಬ್ರೆಸ್ ಲೆಟ್ ಬಿಡಿಸಿ ಅದನ್ನು ಕಿಸೆಯಲ್ಲಿ ಹಾಕಿದರು. ಸುಳ್ಯ ಪೇಟೆಯಲ್ಲಿ ವ್ಯವಹಾರ ನಡೆಸಿ ಮನೆಗೆ ಹೋಗಿ ನೋಡುವಾಗ ಬ್ರೆಸ್ ಲೆಟ್ ಇರಲಿಲ್ಲವೆನ್ನಲಾಗಿದೆ. ಸುಳ್ಯ ಪೇಟೆಯಲ್ಲಿ ಕಳೆದುಹೋಗಿರಬಹುದೆಂದು ಅಂದಾಜಿಸಲಾಗಿದ್ದು, ಸಿಕ್ಕಿದವರು ಸುದ್ದಿ ಕಚೇರಿಗೆ ಅಥವಾ 9480238376 ನಂಬರ್ ಗೆ ಸಂಪರ್ಕಿಸಬಹುದಾಗಿದೆ.