ಪ್ರಗತಿಪರ ಕೃಷಿಕರು, ಸ್ವಾತಿ ಲಾಡ್ಜ್ ಮಾಲಕ ಉದ್ಯಮಿ ಹಾಗೂ
ಸುಳ್ಯಶ್ರೀಗುರುರಾಘವೇಂದ್ರ ಮಠದ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಕೃಷ್ಣ ಸೋಮಯಾಗಿ ಯವರ 60 ರ ಷಷ್ಢ್ಯಬ್ದ ಕಾರ್ಯಕ್ರಮ ಮಾ.30 ರಂದುಗುರುರಾಘವೇಂದ್ರ ಮಠದಲ್ಲಿ ಜರುಗಿತು.
ಷಷ್ಠಿ ಪೂರ್ತಿ ಶಾಂತಿಯ ಪ್ರಯುಕ್ತ ವಿಶೇಷವಾಗಿ ಪೂಜೆಯನ್ನು ಮಠದ ಅರ್ಚಕ ಶ್ರೀ ಹರಿ ಎಳಚಿತ್ತಾಯ ರವರು ನೆರವೇರಿಸಿದರು.



ಶ್ರೀಮತಿ ಪ್ರವೀಣ
ಶ್ರೀಕೃಷ್ಣ ಸೋಮಯಾಗಿ ದಂಪತಿಯನ್ನು ಗಣ್ಯರಾದ ಸದಾನಂದ ಅಸ್ರಣ್ಣ ಕಟೀಲು, ಎ.ಒ.ಎಲ್.ಇ ಅಧ್ಯಕ್ಷಡಾ.ಕೆ.ವಿ.ಚಿದಾನಂದ, ಈಶ್ವರ ಭಟ್ ಅಲಂಗಾರು, ಎಂ.ಬಿ.ಸದಾಶಿವ, ನಾರಾಯಣ ಕೇಕಡ್ಕ, ಕೆ.ಟಿ.ವಿಶ್ವನಾಥ ಸೇರಿದಂತೆ ಅತಿಥಿ ಅಭ್ಯಾಗತರು ಆಗಮಿಸಿ ಆಶೀರ್ವದಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪುತ್ರಿ ಶ್ರೀಮತಿ ಸ್ವಾತಿ, ಅಳಿಯ ಶರಣ್ ಕುಮಾರ್ ಭಟ್, ಪುತ್ರ ಅಖಿಲ್ ಸೋಮಯಾಗಿ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.