ಕಾಸರಗೋಡು ಜಿಲ್ಲೆ ಆದೂರು ಗ್ರಾಮದ ಬೆಳ್ಳೂರು (ಮುಳ್ಳೇರಿಯ) ಶ್ರೀ ಗೋಪಾಲಕೃಷ್ಣ ಕ್ಷೇತ್ರ ಕೋಳಿಕ್ಕಾಲು ಇಲ್ಲಿ ಕಳೆದ ಮಾರ್ಚ್ 2025ರಲ್ಲಿ ನಡೆದ ಅಷ್ಟಬಂದ ಬ್ರಹ್ಮಕಲಶೋತ್ಸವ ವಾರ್ಷಿಕ ಮಹೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರತಿಭೆ ಮುಖೇನ ಸನ್ಮಾನ ಹಾಗೂ ಪ್ರಶಸ್ತಿಯನ್ನು ಶ್ರೀವಾರಿ ಮೆಲೋಡೀಯಸ್ ಆರ್ಕೆಸ್ಟ್ರಾ ಬಾರಡ್ಕ ಇದರ ಸಂಘಟಕರು ನೀಡಿದ್ದು, ಗಾಯಕ ವಿಜಯ್ ಕುಮಾರ್ ಸುಳ್ಯ ಇವರಿಗೆ ಸಂಗೀತ ಕ್ಷೇತ್ರದ ಸಾಧನೆಗಾಗಿ ಸಂಘಟಕರು “ಶ್ರೀವಾರಿ ಸಂಗೀತ ರತ್ನ” ಪ್ರಶಸ್ತಿ 2025 ಯನ್ನು ನೀಡಿರುತ್ತಾರೆ.
ಈ ಪ್ರಶಸ್ತಿಯನ್ನು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಇವರುಗಳು ಶಾಲು ಹಾಕಿ ಪ್ರಶಸ್ತಿಯನ್ನು ನೀಡಿ ಆಶೀರ್ವಾದ ಮಾಡಿರುತ್ತಾರೆ. ಹಾಗೆ ವೇದಿಕೆಯಲ್ಲಿ ಶ್ರೀವಾರಿ ಮೆಲೋಡಿಯಸ್ ಆರ್ಕೆಸ್ಟ್ರಾ ಬಳಗ ಬಾರಡ್ಕ ಇದರ ಸಂಚಾಲಕರಾದ ಗಾಯಕ ವಸಂತ ಬಾರಡ್ಕ ಮತ್ತು ಕವಿ ಸಾಹಿತಿಯಾದ ಉದನೇಶ್ವರ ಪ್ರಸಾದ್ ಮೂಲಡ್ಕ ಮತ್ತಿತರು ವೇದಿಕೆಯಲ್ಲಿದ್ದು ಶುಭ ಹಾರೈಸಿದರು.