ನಾಲ್ಕೂರು ಗ್ರಾಮದಲ್ಲಿರುವ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಏಪ್ರಿಲ್ ೨೨ ಮತ್ತು ೨೩ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಕ್ಷೇತ್ರ ಪಾಲಿನಿ ಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿದ್ದು, ಅದರ ಆಮಂತ್ರಣ ಪತ್ರಿಕೆ ಇಂದು ಬಿಡುಗಡೆಗೊಳಿಸಲಾಯಿತು.

ಆರಂಭದಲ್ಲಿ ದೇವಳದ ಪ್ರಧಾನ ಅರ್ಚಕರಾದ ಮಹಾಬಲೇಶ್ವರ ಭಟ್ ಶ್ರೀದೇವಿಯಲ್ಲಿ ವಾರ್ಷಿಕೋತ್ಸವ ನಿರ್ವಿಘ್ನವಾಗಿ ನೆರವೇರಲಿ ಎಂದು ಪ್ರಾರ್ಥಿಸಿಕೊಂಡರು. ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಪದ್ಮನಾಭ ಗೌಡ ಪರಮಲೆ ಹಾಗೂ ಇನ್ನಿತರ ವ್ಯವಸ್ಥಾಪನ ಸಮಿತಿ ಸದಸ್ಯರು ಮತ್ತು ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ರೋಹಿತ್ ಉತ್ರಂಬೆ, ಕಾರ್ಯದರ್ಶಿ ದಿನೇಶ್ ನಳಿಯಾರು, ಖಜಾಂಜಿ ಪ್ರಜ್ವಲ್ ಪರಮಲೆ ಸೇರಿದಂತೆ ಇನ್ನಿತರ ಸಮಿತಿಯ ಸದಸ್ಯರುಗಳು ಊರವರು ಇದ್ದರು.
(ಚಿತ್ರ ವರದಿ : ಡಿ.ಹೆಚ್.)