ಇತ್ತೀಚೆಗೆ ನಿಧನರಾದ ಶಿವಪ್ಪ ಗೌಡ ಮಾನ್ಯಡ್ಕ ಉರುಂಬಿಯವರ ಶ್ರದ್ಧಾಂಜಲಿ ಸಭೆಯು ಎ. ೧೨ರಂದು ಅವರ ಮನೆಯಲ್ಲಿ ನಡೆಯಿತು. ಉಜಿತ್‌ಶ್ಯಾಂ ಚಿಕ್ಮುಳಿಯವರು ಮೃತರ ಬಗ್ಗೆ ನುಡಿನಮನಗೈದರು. ಮೃತರ ಭಾವಚಿತ್ರಕ್ಕೆ ಪುಷ್ಪನಮನಗೈದು ಶ್ರದ್ದಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಮತಿ ಹೇಮಾವತಿ, ಪುತ್ರ ಸುಜಿತ್, ಪುತ್ರಿ ಶ್ರೀಮತಿ ಸೌಮ್ಯ, ಅಳಿಯ ರಾಜೇಶ್, ಸೊಸೆ ಚೇತನಾ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.