ತೊಡಿಕಾನ ಜಾತ್ರೋತ್ಸವದ ಧ್ವಜಾರೋಹಣ

0

ಸೀಮೆಯ ಗ್ರಾಮಗಳಿಂದ ಹರಿದು ಬಂದ ಹಸಿರುವಾಣಿ

ಸುಳ್ಯ ಸೀಮೆ ಮಹಾತೋಭಾರ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವ ಎ. 13 ರಂದು ಧ್ವಜಾರೋಹಣ ನಡೆಯುವುದರ ಮೂಲಕ ಆರಂಭಗೊಂಡಿತು.

ಬೆಳಿಗ್ಗೆ ತೋಟoಪಾಡಿ ಉಲ್ಲಾಕುಲು ದೈವದ ಭಂಡಾರ ಬಂದು ಬಳಿಕ ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆದು, ಮದ್ಯಾಹ್ನ ಕ್ಷೇತ್ರದ ತಂತ್ರಿವರ್ಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಜಾತ್ರೋತ್ಸವದ ಧ್ವಜಾರೋಹಣ ನಡೆಯಿತು.

ಹಸಿರುವಾಣಿ ಮೆರವಣಿಗೆ : ಬೆಳಿಗ್ಗೆ ಆರಂತೋಡಿನಲ್ಲಿ ವಿವಿಧ ಕಡೆಯಿಂದ ಬಂದ ಹಸಿರುವಾಣಿ ಸಂಗ್ರಹವಾಗಿ ವಾಹನ ಮೆರವಣಿಗೆಯಲ್ಲಿ ತೊಡಿಕಾನಕ್ಕೆ ಸಾಗಿ ಬಂದಿತು . ತೊಡಿಕಾನದ ದೇವರ ಜಳಕದ ಗುಂಡಿ ಬಳಿಯಿಂದ ಹಸಿರುವಾಣಿ ಮೆರವಣಿಗೆ ಬ್ಯಾಂಡ್ ವಾಲಗ, ಕುಣಿತ ಭಜನೆ, ನಾಸಿಕ್ ಬ್ಯಾಂಡ್ ಕಲರವದೊಂದಿಗೆ ಸಾಗಿ ಬಂದಿತು . ಸೀಮೆಯ ನೂರಾರು ಭಕ್ತರು ಈ ಸಂದರ್ಭದಲ್ಲಿ ಮೆರವಣಿಗೆ ಜೊತೆ ಹೆಜ್ಜೆ ಹಾಕಿದರು.

ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪಿ. ಬಿ. ದಿವಾಕರ ರೈ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅವಿನ್ ರಂಗತ್ತಮಲೆ, ಧ್ವಜಾರೋಹಣ ದಿನದ ಅನ್ನದಾನ ಪ್ರಾಯೋಜಕರಾದ ಡಾ. ಕೆ. ವಿ. ರೇಣುಕಾಪ್ರಸಾದ್ ದಂಪತಿಗಳು, ಮರ್ಕಂಜ – ಮಿನುಂಗೂರು ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ತೀರ್ಥರಾಮ ಪರ್ನೋಜಿ, ವಸಂತ ಪೆಲ್ತಡ್ಕ, ಕೆ ಕೆ ಬಾಲಕೃಷ್ಣ, ತಿಮ್ಮಯ್ಯ ಮೆತ್ತಡ್ಕ, ಹರಿಪ್ರಸಾದ್ ಆಲೆಟ್ಟಿ, ಮಾಲತಿ ಭೋಜಪ್ಪ, ಚಂಚಲಾಕ್ಷಿ ಅರಂತೋಡು, ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ, ಹಸಿರುವಾಣಿ ಸಂಚಾಲಕ ಕೇಶವ ಅಡ್ತಲೆ, ಸೀಮೆಯ ವಿವಿಧ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು ತೊಡಿಕಾನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು, ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳು, ಉಪಸಮಿತಿಗಳ ಸಂಚಾಲಕರು, ಸದಸ್ಯರು,ದೇವಳದ ಸಿಬ್ಬಂದಿಗಳು,ವಿವಿಧ ಭಜನಾ ಮಂಡಳಿಯ ಸದಸ್ಯರು ಸಾವಿರಾರು ಭಕ್ತರು ಹಾಜರಿದ್ದರು.