ಸುಳ್ಯ ಶಾಂತಿನಗರದ ಬೆಟ್ಟಂಪಾಡಿ ಕ್ವಾಟ್ರಸ್‌ನಲ್ಲಿ ವಾಸವಾಗಿದ್ದ ಶಿವರಾಜ್ ಎಂಬವರು ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಅವರಿಗೆ ೩೫ ವರ್ಷ ವಯಸ್ಸಾಗಿತ್ತು. ಇವರು ಆಟೋ ಚಲಾಯಿಸಿ ಜೀವನ ನಿರ್ವಹಿಸುತ್ತಿದ್ದ ಇವರು ಮನೆಯಲ್ಲಿ ಪತ್ನಿ ಹೊರಗೆ ಹೋಗಿದ್ದ ಸಂದರ್ಭ ಇವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಸ್ಥಳಿಯರು ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.