ಶ್ರೀ ಸದಾಶಿವ ವೇದ ಪಾಠಶಾಲೆ ಬೆಳ್ಳಾರೆ ಇದರ ಆಶ್ರಯದಲ್ಲಿ ವಸಂತ ವೇದ ಶಿಬಿರವು ಏ.16ರಂದು ಸಂಸ್ಥೆಯ ಪಾಠಶಾಲೆಯಲ್ಲಿ ಆರಂಭಗೊಳ್ಳಲಿದೆ. ಕಾರ್ಯಕ್ರಮವನ್ನು ವೇದಾಂತ ಮತ್ತು ತರ್ಕ ಶಾಸ್ತ್ರದ ವಿದ್ವಾಂಸರಾದ ವೇl ಮೂl ಸತ್ಯನಾರಾಯಣ ಭಟ್ ಚನಿಲ ದೀಪ ಬೆಳಗಿಸಿ ಉದ್ಘಾಟನೆ ಮಾಡಲಿದ್ದಾರೆ. ಸಂಸ್ಥೆಯ ಸ್ಥಾಪಕಾಧ್ಯಕ್ಷ ಪಿ.ಯಸ್ ಚಿದಾನಂದ ರಾವ್ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿರುತ್ತಾರೆ.
ಈ ವಸಂತ ವೇದ ಶಿಬಿರದ ಪ್ರಾಧ್ಯಾಪಕ ವೇl ಮೂl ವೇಣು ಗೋಪಾಲ್ ಭಟ್ ರವರು, ಈ ಶಿಬಿರವನ್ನು ಮುನ್ನಡೆಸಲಿದ್ದು, ಮೇ. 17ರಂದು ಸಮಾರೋಪ ಗೊಳ್ಳಲಿರುತ್ತದೆ ಈ ಕಾರ್ಯಕ್ರಮದಲ್ಲಿ ಸಮಾಜದ ಬಾಂಧವರು ಹಾಜರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಸಂಸ್ಥೆಯ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ಜೋಶಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.