ಚಿಣ್ಣರಮೇಳದ ಸಮಾರೋಪ – 9 ನಾಟಕಗಳು , 140 ಬಾಲ ಕಲಾವಿದರು
ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ (ರಿ.) ಸುಳ್ಯ ಆಶ್ರಯದಲ್ಲಿ , ಡಾ| ಜೀವನ್ ರಾಂ ಸುಳ್ಯ ನೇತೃತ್ವದ 34 ನೇ ವರ್ಷದ ಮಕ್ಕಳ ಬೇಸಿಗೆ ಶಿಬಿರವಾಗಿರುವ ಅಭಿನಯ ಪ್ರಧಾನ ಚಿಣ್ಣರಮೇಳದ ಸಮಾರೋಪವು ಎಪ್ರಿಲ್ 19 ರಂದು ಅಪರಾಹ್ನ 2.00 ಗಂಟೆಗೆ ನಡೆಯಲಿದೆ.
ಇದೇ ಸಂದರ್ಭದಲ್ಲಿ ಮಕ್ಕಳ ಕಿರು ನಾಟಕೋತ್ಸವವನ್ನು ಏರ್ಪಡಿಸಲಾಗಿದೆ. ಮಕ್ಕಳು ಶಿಬಿರದಲ್ಲಿ ಕಲಿತ ವೈವಿಧ್ಯಮಯ ಕತೆಗಳನ್ನಾಧರಿಸಿದ ಒಂಬತ್ತು ಕಿರುನಾಟಕಗಳು ಪ್ರದರ್ಶನಗೊಳ್ಳಲಿವೆ. ಚಿಣ್ಣರಮೇಳದಲ್ಲಿ ಭಾಗವಹಿಸಿದ 143 ಮಕ್ಕಳೂ ರಂಗಮನೆಯ ವೇದಿಕೆಯೇರಿ ಅಭಿನಯಿಸಲಿದ್ದಾರೆ
ಎಂದು ರಂಗಮನೆ ರೂವಾರಿ, ಶಿಬಿರದ ನಿರ್ದೇಶನಕರಾದ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.
ನಾಟಕೋತ್ಸವದಲ್ಲಿ 9 ನಾಟಕಗಳು
ನೀನಾಸಂ, ರಂಗಾಯಣ ಹಾಗೂ ಆಳ್ವಾಸ್, ಡ್ರಾಮಾ ಜ್ಯೂನಿರ್ಸ್ ನಲ್ಲಿ ತರಬೇತಿ ಪಡೆದ ಪ್ರತಿಭಾನ್ವಿತ ಕಲಾವಿದರು ಈ ಮಕ್ಕಳ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಮಧುಸೂದನ್ ಮೈಸೂರು ನಿರ್ದೇಶನದ ಕಪ್ಪೆರಾಯ, ರಾಜೇಂದ್ರ ಪ್ರಸಾದ್ ಮಂಡ್ಯ ನಿರ್ದೇಶನದ ದಿ ಫಾರೆಸ್ಟ್ ಫ್ರೆಂಡ್ ಶಿಪ್, ಮಮತಾ ಕಲ್ಮಕಾರು ನಿರ್ದೇಶಿಸಿದ ಕೊಬ್ಬು ಕತ್ತೆ,
ಭಾವನಾ ಕೆರೆಮಠ ಉಡುಪಿ ನಿರ್ದೇಶನದ ಆಪರೇಶನ್ ಕುಕ್ಕುಟ, ಹಾರಂಬಿ ಯತಿನ್ ವೆಂಕಪ್ಪ ಇವರ ಮೂರ್ಖ ಶಿಷ್ಯರು, ಪ್ರೀತಮ್ ಎಸ್.ಹಾಸನ ನಿರ್ದೇಶಿಸಿದ ಡೆವಿಲ್ ಜೋಕರ್ಸ್, ಮನುಜ ನೇಹಿಗ ನಿರ್ದೇಶಿಸುವ ಕಿಂದರಿ ಜೋಗಿ, ತೇಜಸ್ವಿನಿ ತರಿಕೆರೆ ಹಾಗೂ ನಿಶ್ಮಿತಾ ಬೆಂಗಳೂರು ನಿರ್ದೇಶಿಸಿದ ಬುದ್ಧಿವಂತ ಕೋತಿ, ವಿಜಯ್ ಹಕ್ಕಿ ಬೆಳಗಾವಿ ಹಾಗೂ ಕೃಪಾನಾಯಕ್ ತುಮಕೂರು ನಿರ್ದೇಶನದ ಗೆಳೆಯರ ಬಳಗ
ನಾಟಕಗಳು ಪ್ರದರ್ಶನಗೊಳ್ಳಲಿವೆ.